alex Certify ಕೊರೊನಾ ವೈರಸ್ ನ್ನು‌ ನಾಶ ಮಾಡುತ್ತಂತೆ ಈ ಉಡುಪು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವೈರಸ್ ನ್ನು‌ ನಾಶ ಮಾಡುತ್ತಂತೆ ಈ ಉಡುಪು…!

Anti-Viral' Fabric to Fight Coronavirus? Gujarat Company Comes Up ...

ವಿಶ್ವದೆಲ್ಲೆಡೆ ಕರೋನಾ ಆತಂಕ ಎದುರಾಗಿರುವ ಈ ಸಮಯದಲ್ಲಿ ಗುಜರಾತ್ ಮೂಲದ ಸಂಸ್ಥೆಯೊಂದು ಆ್ಯಂಟಿ‌ ವೈರಲ್ ಫ್ಯಾಬ್ರಿಕ್ ಪರಿಚಯಿಸುವುದಾಗಿ ಘೋಷಿಸಿದೆ.

ಹೌದು, ಗುಜರಾತ್ ಮೂಲದ ಅರವಿಂದ್ ಗಾರ್ಮೆಂಟ್ಸ್ ಸಂಸ್ಥೆ ಈ ಮಹತ್ವದ ಹಾಗೂ ಕ್ರಿಯಾತ್ಮಕ ಘೋಷಣೆಯನ್ನು ಮಾಡಿದೆ‌. ಮುಂದಿನ ಕೆಲ ತಿಂಗಳಲ್ಲಿ 8 ಸಾವಿರ ರಿಟೇಲ್ ಮಳಿಗೆಯಲ್ಲಿ ವೈರಸ್ ವಿರುದ್ಧ ಹೋರಾಡುವ‌ ಈ ಬಟ್ಟೆಗಳು ಲಭ್ಯವಿದೆ ಎಂದು ಹೇಳಿಕೊಂಡಿದೆ.

ಸಂಸ್ಥೆಯ ಪ್ರಕಾರ, ಈ ಬಟ್ಟೆಯ ಮೇಲೆ ಕೂತಿರುವ‌ ಕರೋನಾ ಸೇರಿದಂತೆ ಯಾವುದೇ ವೈರಸ್ ಅರ್ಧ‌ ‌ಗಂಟೆಯಲ್ಲಿ ನಾಶವಾಗಲಿದೆ. ಇದರಿಂದ ಬಟ್ಟೆ ಮೂಲಕ ವೈರಸ್ ಹಬ್ಬುತ್ತದೆ ಎನ್ನುವ ಆತಂಕ ದೂರಾಗಿಸಬಹುದು ಎಂದು ಹೇಳಿದೆ.

ಸ್ವಿಸ್ ಸಂಸ್ಥೆ ಹೇಕ್ ಹಾಗೂ ಥೈವಾನಿನ ರಾಸಾಯನಿಕ ಸಂಸ್ಥೆಯೊಂದಿಗೆ ಸೇರಿ ಈ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ. ಈ ತಂತ್ರಜ್ಞಾನದಲ್ಲಿ ಆರಂಭದಲ್ಲಿ ಶರ್ಟ್ ಹಾಗೂ ಮಾಸ್ಕ್ ಸಿದ್ಧಪಡಿಸಲಾಗುವುದು. ಬಳಿಕ ಬೇರೆ ಉತ್ಪಾದಿಸಲಾಗುವುದು ಎಂದು ತಿಳಿಸಿದೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...