ವಿಶ್ವದೆಲ್ಲೆಡೆ ಕರೋನಾ ಆತಂಕ ಎದುರಾಗಿರುವ ಈ ಸಮಯದಲ್ಲಿ ಗುಜರಾತ್ ಮೂಲದ ಸಂಸ್ಥೆಯೊಂದು ಆ್ಯಂಟಿ ವೈರಲ್ ಫ್ಯಾಬ್ರಿಕ್ ಪರಿಚಯಿಸುವುದಾಗಿ ಘೋಷಿಸಿದೆ.
ಹೌದು, ಗುಜರಾತ್ ಮೂಲದ ಅರವಿಂದ್ ಗಾರ್ಮೆಂಟ್ಸ್ ಸಂಸ್ಥೆ ಈ ಮಹತ್ವದ ಹಾಗೂ ಕ್ರಿಯಾತ್ಮಕ ಘೋಷಣೆಯನ್ನು ಮಾಡಿದೆ. ಮುಂದಿನ ಕೆಲ ತಿಂಗಳಲ್ಲಿ 8 ಸಾವಿರ ರಿಟೇಲ್ ಮಳಿಗೆಯಲ್ಲಿ ವೈರಸ್ ವಿರುದ್ಧ ಹೋರಾಡುವ ಈ ಬಟ್ಟೆಗಳು ಲಭ್ಯವಿದೆ ಎಂದು ಹೇಳಿಕೊಂಡಿದೆ.
ಸಂಸ್ಥೆಯ ಪ್ರಕಾರ, ಈ ಬಟ್ಟೆಯ ಮೇಲೆ ಕೂತಿರುವ ಕರೋನಾ ಸೇರಿದಂತೆ ಯಾವುದೇ ವೈರಸ್ ಅರ್ಧ ಗಂಟೆಯಲ್ಲಿ ನಾಶವಾಗಲಿದೆ. ಇದರಿಂದ ಬಟ್ಟೆ ಮೂಲಕ ವೈರಸ್ ಹಬ್ಬುತ್ತದೆ ಎನ್ನುವ ಆತಂಕ ದೂರಾಗಿಸಬಹುದು ಎಂದು ಹೇಳಿದೆ.
ಸ್ವಿಸ್ ಸಂಸ್ಥೆ ಹೇಕ್ ಹಾಗೂ ಥೈವಾನಿನ ರಾಸಾಯನಿಕ ಸಂಸ್ಥೆಯೊಂದಿಗೆ ಸೇರಿ ಈ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ. ಈ ತಂತ್ರಜ್ಞಾನದಲ್ಲಿ ಆರಂಭದಲ್ಲಿ ಶರ್ಟ್ ಹಾಗೂ ಮಾಸ್ಕ್ ಸಿದ್ಧಪಡಿಸಲಾಗುವುದು. ಬಳಿಕ ಬೇರೆ ಉತ್ಪಾದಿಸಲಾಗುವುದು ಎಂದು ತಿಳಿಸಿದೆ.