alex Certify ಸಣ್ಣ ಉದ್ದಿಮೆದಾರರಿಗೆ ಮತ್ತೊಂದು ಗುಡ್ ನ್ಯೂಸ್: 3 ತಿಂಗಳಿಗೊಮ್ಮೆ GST ರಿಟರ್ನ್ಸ್ ಸಲ್ಲಿಸಿದ್ರೆ ಸಾಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಣ್ಣ ಉದ್ದಿಮೆದಾರರಿಗೆ ಮತ್ತೊಂದು ಗುಡ್ ನ್ಯೂಸ್: 3 ತಿಂಗಳಿಗೊಮ್ಮೆ GST ರಿಟರ್ನ್ಸ್ ಸಲ್ಲಿಸಿದ್ರೆ ಸಾಕು

ನವದೆಹಲಿ: ಸಣ್ಣ ಉದ್ದಿಮೆದಾರರಿಗೆ ಕೇಂದ್ರದಿಂದ ಸಿಹಿಸುದ್ದಿ ಸಿಗಲಿದೆ. ಜನವರಿಯಿಂದ ಮೂರು ತಿಂಗಳಿಗೊಮ್ಮೆ ಜಿಎಸ್ಟಿ ರಿಟರ್ನ್ಸ್ ಸಲ್ಲಿಸಬಹುದಾಗಿದೆ.

ವಾರ್ಷಿಕ 5 ಕೋಟಿ ರೂಪಾಯಿ ವಹಿವಾಟು ನಡೆಸುವ ಸಣ್ಣ ಉದ್ದಿಮೆದಾರರು ಜನವರಿಯಿಂದ 3 ತಿಂಗಳಿಗೊಮ್ಮೆ ಜಿಎಸ್ಟಿ ಆರ್ -3ಬಿ ಸಲ್ಲಿಸಬಹುದಾಗಿದೆ ಎಂದು ಹೇಳಲಾಗಿದೆ.

ಇದರಿಂದಾಗಿ 94 ಲಕ್ಷ ತೆರಿಗೆದಾರರಿಗೆ ಅನುಕೂಲವಾಗುತ್ತದೆ. ಜಿಎಸ್ಟಿ ಪಾವತಿದಾರದಲ್ಲಿ ಶೇಕಡ 92 ರಷ್ಟು ಇವರ ಪಾಲು ಇದ್ದು, ಜಿಎಸ್ಟಿ ಆರ್ -3ಬಿ ತಿಂಗಳಿಗೊಮ್ಮೆ ಸಲ್ಲಿಕೆ ಮಾಡುತ್ತಿದ್ದಾರೆ. ಜನವರಿಯಿಂದ 3 ತಿಂಗಳಿಗೆ ಒಮ್ಮೆ ವರ್ಷಕ್ಕೆ 4 ಸಲ ಜಿಎಸ್ಟಿ ರಿಟರ್ನ್ಸ್ ಸಲ್ಲಿಸಬಹುದು. ವಾರ್ಷಿಕ 5 ಕೋಟಿ ರೂಪಾಯಿವರೆಗೆ ವಹಿವಾಟು ನಡೆಸುವವರಿಗೆ ಇದು ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...