alex Certify GST ಹೊಸ ನಿಯಮ: GST ಮರುಪಾವತಿಗೆ ಈಗ ಆಧಾರ್ ದೃಢೀಕರಣ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GST ಹೊಸ ನಿಯಮ: GST ಮರುಪಾವತಿಗೆ ಈಗ ಆಧಾರ್ ದೃಢೀಕರಣ ಕಡ್ಡಾಯ

ನವದೆಹಲಿ: ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ 45 ನೇ ಸಭೆಯಲ್ಲಿ ಜಿಎಸ್‌ಟಿ ಮರುಪಾವತಿಗೆ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಲು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದೆ.

ಈ ತಿಂಗಳ ಆರಂಭದಲ್ಲಿ ಲಕ್ನೋದಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ನ ಸಭೆಯಲ್ಲಿ ಸದಸ್ಯರು ಜಿಎಸ್‌ಟಿ ಮರುಪಾವತಿ ಪಡೆಯಲು ಆಧಾರ್ ದೃಢೀಕರಣ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದ್ದು, ಈ ಬದಲಾವಣೆ ಜಾರಿಗೆ ತರಲು, ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ(CBIC) ಶನಿವಾರ ಜಿಎಸ್ಟಿ ನಿಯಮಗಳಿಗೆ ತಿದ್ದುಪಡಿ ಮಾಡಿರುವುದಾಗಿ ಘೋಷಿಸಿದೆ.

ವಿವಿಧ ವಂಚನೆ ವಿರೋಧಿ ಕ್ರಮಗಳನ್ನು ತರಲು ಹೊಸ ನಿಯಮ ಪರಿಚಯಿಸಲಾಗಿದೆ. ಈ ಕ್ರಮಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ನೋಂದಣಿ ಪಡೆದಿರುವ ಅದೇ ಬ್ಯಾಂಕ್ ಖಾತೆಯಲ್ಲಿ ಪ್ಯಾನ್‌ಗೆ ಲಿಂಕ್ ಮಾಡಿರುವ ಖಾತೆಗೆ ಮಾತ್ರ ಜಿಎಸ್‌ಟಿ ಮರುಪಾವತಿ ವಿತರಣೆಯಾಗಲಿದೆ.

ಸಿಬಿಐಸಿ ಅಧಿಸೂಚನೆ ಪ್ರಕಾರ ರಿಟರ್ನ್ಸ್ ಸಲ್ಲಿಸಲು ಮತ್ತು ಮಾಸಿಕ ಜಿಎಸ್‌ಟಿ ಪಾವತಿಸಲು ವಿಫಲವಾದ ವ್ಯವಹಾರಗಳು ಮುಂದಿನ ತಿಂಗಳ ರಿಟರ್ನ್ಸ್‌ ಗಾಗಿ ಜಿಎಸ್‌ಟಿಆರ್ -1 ಅನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ನಿಯಮ ಜನವರಿ 1, 2022 ರಿಂದ ಜಾರಿಗೆ ಬರಲಿದೆ.

ಸಿಬಿಐಸಿ, ಎಎಂಆರ್‌ಜಿ ಮತ್ತು ಅಸೋಸಿಯೇಟ್ಸ್ ಹಿರಿಯ ಪಾಲುದಾರ ರಜತ್ ಮೋಹನ್ ಅವರು. ತೆರಿಗೆ ವಂಚನೆ ತಡೆಗೆ ರದ್ದತಿ ನೋಂದಣಿ ಮತ್ತು ಮರುಪಾವತಿ ಅರ್ಜಿಯನ್ನು ಹಿಂಪಡೆಯಲು ಅರ್ಜಿ ಸಲ್ಲಿಸುವಾಗ ಮಾಲೀಕ, ಪಾಲುದಾರ, ಕರ್ತ, ವ್ಯವಸ್ಥಾಪಕ ನಿರ್ದೇಶಕರು, ಪೂರ್ಣಾವಧಿ ನಿರ್ದೇಶಕರ ಅಧಿಕೃತ ಸಹಿ ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

ಜಿಎಸ್‌ಟಿಆರ್ -1 ರಿಟರ್ನ್ ಫೈಲಿಂಗ್‌ಗೆ ಸಂಬಂಧಿಸಿದ ಹೊಸ ನಿಯಮವನ್ನು ಜಾರಿಗೆ ತರಲು ಸಿಬಿಐಸಿ ಕೇಂದ್ರ ಜಿಎಸ್‌ಟಿ ನಿಯಮಗಳ ನಿಯಮ 59 (6) ಅನ್ನು ಜನವರಿ 1, 2022 ರಿಂದ ಜಾರಿಗೆ ತರುತ್ತದೆ.

ಇದುವರೆಗಿನ ನಿಯಮದಂತೆ ಜಿಎಸ್‌ಟಿ ಫೈಲ್‌ ದಾರರು ಹಿಂದಿನ ಎರಡು ತಿಂಗಳವರೆಗೆ ಡೀಫಾಲ್ಟ್ ಆಗಿದ್ದರೆ ಜಿಎಸ್‌ಟಿಆರ್ -3 ಬಿ ಯಲ್ಲಿ ಬಾಹ್ಯ ಪೂರೈಕೆ ಅಥವಾ ಜಿಎಸ್‌ಟಿಆರ್ -1 ರಿಟರ್ನ್ಸ್‌ ಗಾಗಿ ಸಲ್ಲಿಸಬಹುದು. ಸೆಪ್ಟೆಂಬರ್ 17 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲಾ ಹೊಸ ಬದಲಾವಣೆಗಳನ್ನು ಚರ್ಚಿಸಿ ಅನುಮೋದಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...