alex Certify BIG NEWS: GST ಕನಿಷ್ಠ ದರ ಶೇ. 8 ಕ್ಕೆ ಏರಿಕೆ..? ಶೇ. 12 ಸ್ಲ್ಯಾಬ್ ಕೈಬಿಟ್ಟು ತೆರಿಗೆಗೆ ಮೂರೇ ಸ್ಲ್ಯಾಬ್..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: GST ಕನಿಷ್ಠ ದರ ಶೇ. 8 ಕ್ಕೆ ಏರಿಕೆ..? ಶೇ. 12 ಸ್ಲ್ಯಾಬ್ ಕೈಬಿಟ್ಟು ತೆರಿಗೆಗೆ ಮೂರೇ ಸ್ಲ್ಯಾಬ್..?

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಆರಂಭಿಕ ಸ್ಲ್ಯಾಬ್ ಅನ್ನು ಶೇಕಡ 5 ರಿಂದ ಶೇಕಡಾ 8 ಕ್ಕೆ ಏರಿಸಲು ಜಿ.ಎಸ್‌.ಟಿ. ಕೌನ್ಸಿಲ್ ಚಿಂತನೆ ನಡೆಸಿದೆ.

ಸರಕು ಮತ್ತು ಸೇವಾ ತೆರಿಗೆ ವಿನಾಯಿತಿ ಪಟ್ಟಿಗೆ ಕತ್ತರಿ ಹಾಕಬಹುದು. ಆದಾಯವನ್ನು ಹೆಚ್ಚಿಸಲು ಮತ್ತು ರಾಜ್ಯಗಳ ಅವಲಂಬನೆ ದೂರ ಮಾಡಲು ಈ ಕ್ರಮಕೈಗೊಳ್ಳುವ ಸಾಧ್ಯತೆ ಇದೆ. ಪ್ರಸ್ತುತ, GST ನಾಲ್ಕು ಹಂತದಲ್ಲಿ ರಚನೆಯಾಗಿದ್ದು, ಶೇ. 5, ಶೇ. 12, ಶೇ. 18 ಮತ್ತು ಶೇ. 28 ಶೇಕಡಾ ತೆರಿಗೆ ದರ ನಿಗದಿ ಮಾಡಲಾಗಿದೆ.

ಅತ್ಯಗತ್ಯ ವಸ್ತುಗಳಿಗೆ ಕಡಿಮೆ ಸ್ಲ್ಯಾಬ್‌ನಲ್ಲಿ ವಿನಾಯಿತಿ ಅಥವಾ ತೆರಿಗೆ ವಿಧಿಸಲಾಗುತ್ತದೆ, ಐಷಾರಾಮಿ ವಸ್ತುಗಳು ಅತ್ಯಧಿಕ ಸ್ಲ್ಯಾಬ್ ನಡಿ ಬರುತ್ತವೆ. ಐಷಾರಾಮಿ ಸರಕುಗಳು ಅತ್ಯಧಿಕ ಶೇ. 28 ಸ್ಲ್ಯಾಬ್‌ ನ ಮೇಲೆ ಸೆಸ್ ವಿಧಿಸಲಾಗುವುದು. ಮೂಲಗಳ ಪ್ರಕಾರ, 5 ಶೇಕಡಾ ಸ್ಲ್ಯಾಬ್ ಅನ್ನು ಶೇಕಡಾ 8 ಕ್ಕೆ ಏರಿಸಲು ಪ್ರಸ್ತಾಪಿಸುವ ಸಾಧ್ಯತೆಯಿದೆ, ಇದು ಹೆಚ್ಚುವರಿ 1.50 ಲಕ್ಷ ಕೋಟಿ ವಾರ್ಷಿಕ ಆದಾಯವನ್ನು ನೀಡುತ್ತದೆ. ಲೆಕ್ಕಾಚಾರಗಳ ಪ್ರಕಾರ, ಮುಖ್ಯವಾಗಿ ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳನ್ನು ಒಳಗೊಂಡಿರುವ ಕಡಿಮೆ ಸ್ಲ್ಯಾಬ್‌ನಲ್ಲಿ ಶೇಕಡ 1 ರಷ್ಟು ಹೆಚ್ಚಳವು ವಾರ್ಷಿಕವಾಗಿ 50,000 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸುತ್ತದೆ.ಇದರ ಭಾಗವಾಗಿ, GoM ಸಹ ಶೇ. 8, ಶೇ.  18 ಮತ್ತು ಶೇ. 28 ರಷ್ಟು ದರಗಳೊಂದಿಗೆ 3-ಹಂತದ GST ರಚನೆ ಮಾಡುವ ಸಾಧ್ಯತೆ ಇದೆ.

ಪ್ರಸ್ತಾವನೆ ಬಂದರೆ ಪ್ರಸ್ತುತ ಶೇ.12 ರಷ್ಟು ತೆರಿಗೆ ವಿಧಿಸಲಾಗುತ್ತಿರುವ ಎಲ್ಲ ಸರಕು ಮತ್ತು ಸೇವೆಗಳು ಶೇ.18 ರ ಸ್ಲ್ಯಾಬ್‌ಗೆ ಹೋಗುತ್ತವೆ. ಇದಲ್ಲದೆ, GST ಯಿಂದ ವಿನಾಯಿತಿ ಪಡೆದ ವಸ್ತುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹ GoM ಪ್ರಸ್ತಾಪಿಸುತ್ತದೆ. ಪ್ರಸ್ತುತ, ಪ್ಯಾಕ್ ಮಾಡದ ಮತ್ತು ಬ್ರಾಂಡ್ ಮಾಡದ ಆಹಾರ ಮತ್ತು ಡೈರಿ ವಸ್ತುಗಳನ್ನು GST ಯಿಂದ ವಿನಾಯಿತಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...