ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಿಂದ(ಜಿ.ಎಸ್.ಟಿ.) ಮಾರ್ಚ್ 2022 ರಲ್ಲಿ ಒಟ್ಟು ಆದಾಯ ಸಂಗ್ರಹ ಸಾರ್ವಕಾಲಿಕ ಗರಿಷ್ಠ 1,42,095 ಕೋಟಿ ರೂ.ಗೆ ಏರಿಕೆಯಾಗಿದೆ.
ಇದು 2022 ರ ಜನವರಿಯಲ್ಲಿನ ಹಿಂದಿನ ದಾಖಲೆಯ 1,40,986 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಶುಕ್ರವಾರ ತಿಳಿಸಿದೆ.
ಮಾರ್ಚ್ 2022 ರಲ್ಲಿ ಒಟ್ಟು GST ಆದಾಯವು 1,42,095 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕೇಂದ್ರ GST 25,830 ಕೋಟಿ ರೂ., ರಾಜ್ಯ GST 32,378 ಕೋಟಿ ರೂ., ಇಂಟಿಗ್ರೇಟೆಡ್ GST ಮತ್ತು ಸೆಸ್ 9,417 ಕೋಟಿ ರೂ.(ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 981 ಕೋಟಿ ಸೇರಿದಂತೆ) ಎಂದು ಹಣಕಾಸು ಸಚಿವಾಲಯ ತಿಳಿಸಿದೆ.