ನವದೆಹಲಿ: ಸೆಪ್ಟೆಂಬರ್ ನಲ್ಲಿ ಒಟ್ಟು ಜಿ.ಎಸ್.ಟಿ. ಸಂಗ್ರಹವು ಶೇಕಡ 10 ರಷ್ಟು ಏರಿಕೆಯಾಗಿ 1.62 ಲಕ್ಷ ಕೋಟಿ ರೂ.ಗೆ ತಲುಪಿದೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ನಾಲ್ಕನೇ ಬಾರಿಗೆ 1.6 ಲಕ್ಷ ಕೋಟಿ ರೂ. ಗಡಿ ದಾಟಿದೆ.
ಕಳೆದ ತಿಂಗಳು ಒಟ್ಟು ಜಿಎಸ್‌ಟಿ ಆದಾಯ 1,62,712 ಕೋಟಿ ರೂ. ಇದರಲ್ಲಿ ಕೇಂದ್ರ ಜಿಎಸ್‌ಟಿ 29,818 ಕೋಟಿ ರೂ., ರಾಜ್ಯ ಜಿಎಸ್‌ಟಿ 37,657 ಕೋಟಿ ರೂ., ಇಂಟಿಗ್ರೇಟೆಡ್ ಜಿಎಸ್‌ಟಿ 83,623 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹವಾದ 41,145 ಕೋಟಿ ರೂ.ಸೇರಿ) ಮತ್ತು ಸೆಸ್ 11,613 ಕೋಟಿ ರೂ. (ಆಮದು ವಸ್ತುಗಳ ಮೇಲೆ ಸಂಗ್ರಹವಾದ 881 ಕೋಟಿ ರೂ.ಸೇರಿ)
2023ರ ಸೆಪ್ಟೆಂಬರ್ ನಲ್ಲಿನ ಆದಾಯವು ಕಳೆದ ವರ್ಷ ಇದೇ ತಿಂಗಳ ಜಿಎಸ್‌ಟಿ ಆದಾಯ 1.47 ಲಕ್ಷ ಕೋಟಿ ರೂ.ಗಿಂತ ಶೇ 10ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.
ಮಾಸಿಕದಲ್ಲಿ, ದೇಶೀಯ ವಹಿವಾಟುಗಳಿಂದ(ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇಕಡ 14 ರಷ್ಟು ಹೆಚ್ಚಾಗಿದೆ. FY 2023-24 ರಲ್ಲಿ ಇದು ನಾಲ್ಕನೇ ಬಾರಿಗೆ ಒಟ್ಟು ಜಿಎಸ್‌ಟಿ ಸಂಗ್ರಹವು 1.60 ಲಕ್ಷ ಕೋಟಿ ರೂ.ಗಡಿ ದಾಟಿದೆ ಎಂದು ಹೇಳಿದೆ.