alex Certify BIG NEWS: ಕೊರೊನಾ ಸಂದರ್ಭದಲ್ಲಿ ನೌಕರರಿಗೆ 70 ಲಕ್ಷ ರೂ. ವಿಮೆ ರಕ್ಷಣೆ ನೀಡ್ತಿದೆ ಈ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಸಂದರ್ಭದಲ್ಲಿ ನೌಕರರಿಗೆ 70 ಲಕ್ಷ ರೂ. ವಿಮೆ ರಕ್ಷಣೆ ನೀಡ್ತಿದೆ ಈ ಕಂಪನಿ

ಆಟೋ ಭಾಗಗಳನ್ನು ತಯಾರಿಸುವ ಬಾಷ್ ಗ್ರೂಪ್, ತನ್ನ ನೌಕರರಿಗೆ ಆರ್ಥಿಕ ನೆರವು ನೀಡುವ ಘೋಷಣೆ ಮಾಡಿದೆ. ಕೊರೊನಾ ವೈರಸ್ ನಿಂದ ಯಾವುದೇ ಭಾರತೀಯ ಉದ್ಯೋಗಿ ಸಾವನ್ನಪ್ಪಿದ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಸರಾಸರಿ 70 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಒದಗಿಸುವುದಾಗಿ ಕಂಪನಿ ಹೇಳಿದೆ.

ಕೊರೊನಾ ರೋಗವನ್ನು ಎದುರಿಸಲು ಪರಿಹಾರ ಕ್ರಮಗಳ ಪ್ರಯತ್ನವನ್ನೂ ಕಂಪನಿ ಹೆಚ್ಚಿಸಿದೆ. ಕೋವಿಡ್ -19ಗೆ ಉದ್ಯೋಗಿ ಸಾವನ್ನಪ್ಪಿದ್ರೆ ಆತನ ಕುಟುಂಬಕ್ಕೆ ಮೂರು ವರ್ಷಗಳವರೆಗೆ ಆರೋಗ್ಯ ವಿಮೆ ನೀಡುವುದಾಗಿ ಬಾಷ್ ಕಂಪನಿ ಹೇಳಿದೆ. ಕೊರೊನಾ ವೈರಸ್ ಎರಡನೇ ಅಲೆಯಲ್ಲಿ ಆಮ್ಲಜನಕ ಪೂರೈಕೆ ಮತ್ತು ಆರೋಗ್ಯ ಸೌಲಭ್ಯಗಳ ಅಗತ್ಯತೆಗಳನ್ನು ಪೂರೈಸಲು ಕಂಪನಿ ಬೆಂಗಳೂರು ಮತ್ತು ಪುಣೆಯಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪಿಸಿದೆ. ಕಂಪನಿಯು ಆಕ್ಸಿಜನ್ ಪ್ಲಾಂಟ್‌ನಲ್ಲಿ ಸಹ ಹೂಡಿಕೆ ಮಾಡಲಿದೆ.

ಮೃತ ನೌಕರನ ಕುಟುಂಬಕ್ಕೆ 70 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಕಾನೂನು ಉತ್ತರಾಧಿಕಾರಿಗಳಿಗೆ ನೀಡಲಾಗುವುದು. ಅಲ್ಲದೆ ಉದ್ಯೋಗಿ ಸಾವಿನ ದಿನಾಂಕದಿಂದ ಮೂರು ವರ್ಷಗಳವರೆಗೆ ಅವನ ಕುಟುಂಬಗಳಿಗೆ ಆರೋಗ್ಯ ವಿಮೆ ನೀಡಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...