ನವದೆಹಲಿ: ಕೊರತೆಯನ್ನು ನೀಗಿಸಲು ಸರ್ಕಾರ ಈ ವರ್ಷ 10 ಲಕ್ಷ ಟನ್ ಗಳಷ್ಟು ತೊಗರಿಬೇಳೆಯನ್ನು ಆಮದು ಮಾಡಿಕೊಳ್ಳಲು ಯೋಜಿಸಿದೆ
ಈ ವರ್ಷ ಖಾಸಗಿ ವ್ಯಾಪಾರದ ಮೂಲಕ ಸುಮಾರು 10 ಲಕ್ಷ ಟನ್ ತೊಗರಿಬೇಳೆ ಆಮದು ಮಾಡಿಕೊಳ್ಳಲು ಮುಂಗಡ ಯೋಜನೆ ರೂಪಿಸಿದೆ.
ಇಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್, ಕರ್ನಾಟಕದ ಕಲಬುಗಿ ಪ್ರದೇಶಗಳಲ್ಲಿ ಹವಾಮಾನ ಮತ್ತು ಕೊಳೆ ರೋಗದಿಂದಾಗಿ ತೊಗರಿ ಉತ್ಪಾದನೆಯಲ್ಲಿ ಕೊರತೆ ಉಂಟಾಗಬಹುದು. ಯಾವುದೇ ಕೊರತೆಯನ್ನು ಆಮದು ಮೂಲಕ ಪೂರೈಸಲು ಯೋಜನೆ ರೂಪಿಸಲಾಗಿದೆ. 2021-22ರಲ್ಲಿ ಸುಮಾರು 7.6 ಲಕ್ಷ ಟನ್ ಟರ್ ಆಮದು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.