alex Certify ವಾಹನ ನೋಂದಣಿ: ಸಾರಿಗೆ ಸಚಿವಾಲಯದಿಂದ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ನೋಂದಣಿ: ಸಾರಿಗೆ ಸಚಿವಾಲಯದಿಂದ ಗುಡ್ ನ್ಯೂಸ್

ನವದೆಹಲಿ: ವಾಹನ ನೋಂದಣಿ ನೀತಿ ಸುಧಾರಣೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ವಿಶೇಷ ಚೇತನರಿಗೆ ವಾಹನ ಮಾಲೀಕತ್ವ ಸಮಸ್ಯೆಗಳಿಗೆ ಪರಿಹಾರ ನೀಡಲು ಹಳೆ ವಾಹನ ಕಾಯ್ದೆಯಲ್ಲಿ ವಾಹನ ಮಾಲೀಕತ್ವ ಕುರಿತಂತೆ ಸ್ಪಷ್ಟವಾಗಿ ನಮೂದಿಸಲು ಅವಕಾಶ ಇರಲಿಲ್ಲ.

ಇದರಿಂದಾಗಿ ವಿಶೇಷ ಹಣಕಾಸು ನೆರವು, ಯೋಜನೆಗಳ ಸೌಲಭ್ಯ ಪಡೆಯಲು ಕಷ್ಟಸಾಧ್ಯವಾಗಿತ್ತು. ಈಗ ಮೋಟಾರು ವಾಹನಗಳ ದಾಖಲಾತಿಗಳಲ್ಲಿ ಮಾಲೀಕತ್ವದ ವಿವರಗಳಿಗೆ ಸಂಬಂಧಿಸಿದಂತೆ ವಾಹನ ನೋಂದಣಿ ನೀತಿ ಸುಧಾರಣೆಗೆ ಸಾರಿಗೆ ಸಚಿವಾಲಯ ಅಧಿಸೂಚನೆ ಪ್ರಕಟಿಸಿದೆ.

ಮೋಟಾರು ವಾಹನ ನಿಯಮಾವಳಿಗಳಿಗೆ ತಿದ್ದುಪಡಿ ಹೊರಡಿಸಲಾಗಿದ್ದು ಇದರಿಂದ ಮುಖ್ಯವಾಗಿ ವಿಶೇಷಚೇತನರಿಗೆ ಪ್ರಯೋಜನವಾಗಲಿದೆ ಎಂದು ಹೇಳಲಾಗಿದೆ. ನಿಯಮಾವಳಿ ಪರಿಷ್ಕರಿಸಿರುವುದರಿಂದ ವಿಕಲಚೇತನರಿಗೆ ವಾಹನ ಮಾಲೀಕತ್ವ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...