ನವದೆಹಲಿ: ಕೊರೊನಾ ಲಾಕ್ಡೌನ್ ನಿಂದಾಗಿ ಜಿಎಸ್ಟಿ ಆದಾಯದಲ್ಲಿ ಭಾರಿ ಕುಸಿತವಾದ ಕಾರಣ ಕೊರತೆ ನೀಗಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರದ ವತಿಯಿಂದ ಎರಡು ಆಯ್ಕೆಗಳನ್ನು ನೀಡಲಾಗಿದೆ.
ಆರ್.ಬಿ.ಐ.ನಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆದುಕೊಳ್ಳಲು ಸೂಚಿಸಲಾಗಿದೆ. ರಾಜ್ಯ ಸರ್ಕಾರಗಳ ವಿರೋಧದ ಹಿನ್ನೆಲೆಯಲ್ಲಿ ಜಿಎಸ್ಟಿ ನಷ್ಟದ ಸಾಲಕ್ಕೆ ಕೇಂದ್ರದಿಂದಲೇ ಬಡ್ಡಿ ಪಾವತಿಸಲಾಗುವುದು.
ಆರ್.ಬಿ.ಐ.ನಿಂದ ಅಗ್ಗದ ಸಾಲ ಕೊಡಿಸಲಾಗುವುದು. ಜಿಎಸ್ಟಿ ಪರಿಹಾರವನ್ನು ಆರ್.ಬಿ.ಐ.ನಿಂದ ಸಾಲದ ರೂಪದಲ್ಲಿ ಪಡೆಯಲು ರಾಜ್ಯ ಸರ್ಕಾರಗಳು ಮುಂದಾದರೆ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವ ಜೊತೆಗೆ ಬಡ್ಡಿಯನ್ನು ಬಿಎಸ್ಟಿ ಸೆಸ್ ಮೂಲಕ ಪಾವತಿಸಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.