alex Certify ಎಲೆಕ್ಟ್ರಿಕ್ ವೆಹಿಕಲ್ ಗಳಿಗೆ ಉತ್ತೇಜನಕ್ಕೆ ಸರ್ಕಾರದಿಂದ ಮಹತ್ವದ ಕ್ರಮ: ಲೈಸೆನ್ಸ್ ಇಲ್ಲದೆ ಚಾರ್ಜಿಂಗ್ ಕೇಂದ್ರ ತೆರೆಯಬಹುದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಟ್ರಿಕ್ ವೆಹಿಕಲ್ ಗಳಿಗೆ ಉತ್ತೇಜನಕ್ಕೆ ಸರ್ಕಾರದಿಂದ ಮಹತ್ವದ ಕ್ರಮ: ಲೈಸೆನ್ಸ್ ಇಲ್ಲದೆ ಚಾರ್ಜಿಂಗ್ ಕೇಂದ್ರ ತೆರೆಯಬಹುದು

ನವದೆಹಲಿ: ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲು ಸರ್ಕಾರ ಮತ್ತೊಂದು ಕ್ರಮಕೈಗೊಂಡಿದ್ದು, ಯಾರು ಬೇಕಾದರೂ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಬಹುದು. ಇದಕ್ಕೆ ಲೈಸೆನ್ಸ್ ಅಗತ್ಯವಿಲ್ಲ.

ಖಾಸಗಿ ಸಂಸ್ಥೆ, ವ್ಯಕ್ತಿಗಳು ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ ತೆರೆಯಲು ಯಾವುದೇ ಲೈಸೆನ್ಸ್ ಪಡೆಯಬೇಕಿಲ್ಲ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ಗೃಹಬಳಕೆಯ ವಿದ್ಯುತ್ ದರದಲ್ಲಿಯೇ ಹಾಲಿ ಇರುವ ಸಂಪರ್ಕ ಬಳಸಿಕೊಂಡು ಕಚೇರಿ ಅಥವಾ ಮನೆಗಳಲ್ಲಿ ತಮ್ಮ ವಾಹನ ಚಾರ್ಜ್ ಮಾಡಿಕೊಳ್ಳಲು ವಾಹನ ಮಾಲೀಕರಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಖಾಸಗಿ ಕಂಪನಿ, ವ್ಯಕ್ತಿಗಳು ತಮ್ಮ ಜಾಗದಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಘಟಕಗಳನ್ನು ತೆರೆಯಬಹುದು. ಸರ್ಕಾರಕ್ಕೆ ಪ್ರತಿ ಯೂನಿಟ್ ಗೆ ಒಂದು ರೂಪಾಯಿ ನೀಡಿದಲ್ಲಿ ಸರ್ಕಾರದಿಂದಲೇ ಚಾರ್ಜಿಂಗ್ ಘಟಕ ತೆರೆಯಲು ಜಾಗ ನೀಡಲಾಗುವುದು. ಮನೆ ಅಥವಾ ಕಚೇರಿಗಳಲ್ಲಿ ಈಗ ಇರುವ ವಿದ್ಯುತ್ ದರದಲ್ಲಿಯೇ ಎಲೆಕ್ಟ್ರಿಕ್ ವಾಹನ ಚಾರ್ಜ್ ಮಾಡಿಕೊಳ್ಳಬಹುದು ಎಂದು ವಿದ್ಯುತ್ ಸಚಿವಾಲಯದಿಂದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...