ದಶಕಾಂತ್ಯದ ವೇಳೆಗೆ ಭಾರತವು ತನ್ನ ಇಂಧನ ಅಗತ್ಯದ 40%ನಷ್ಟನ್ನು ನವೀಕರಿಸಬಲ್ಲ ಮೂಲಗಳಿಂದಲೇ ಉತ್ಪಾದನೆ ಮಾಡಿಕೊಳ್ಳಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ನೈಸರ್ಗಿಕ ಅನಿಲದ ಬೆಲೆಯನ್ನು ಜಿಎಸ್‌ಟಿ ಅಡಿಗೆ ತರುವ ಮೂಲಕ ದೇಶಾದ್ಯಂತ ಸಮಾನ ಬೆಲೆಯನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ.
“ಪ್ರಾಕೃತಿಕ ಅನಿಲವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಇಚ್ಛಿಸುತ್ತೇವೆ. ಭಾರತದ ಇಂಧನ ಕ್ಷೇತ್ರದಲ್ಲಿ ಬಂದು ಹೂಡಿಕೆ ಮಾಡಲು ಜಗತ್ತಿಗೆ ತಿಳಿಸಲು ಇಚ್ಛಿಸುತ್ತೇವೆ” ಎಂದಿರುವ ಮೋದಿ, ಭಾರತವು ಮುಂದಿನ 5 ವರ್ಷಗಳ ಅವಧಿಯಲ್ಲಿ ಅನಿಲ ಹಾಗೂ ತೈಲ ಮೂಲ ಸೌಕರ್ಯ ನಿರ್ಮಾಣಕ್ಕೆಂದು 7.5 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ ಎಂದಿದ್ದಾರೆ.
LPG ಸಿಲಿಂಡರ್ ಬಳಕೆದಾರರಿಗೆ ತಿಳಿದಿರಲೇ ಬೇಕು ಈ ಬಹು ಮುಖ್ಯ ಮಾಹಿತಿ
2019-20ರ ಅವಧಿಯಲ್ಲಿ ಭಾರತವು ತನ್ನ ಆಂತರಿಕ ಅಗತ್ಯದ 85%ನಷ್ಟು ತೈಲ ಹಾಗೂ 53%ನಷ್ಟು ಅನಿಲವನ್ನು ಆಮದು ಮಾಡಿಕೊಂಡಿದೆ. ಈ ಯೋಜನೆಗಳ ಮೇಲೆ ಸ್ವಲ್ಪ ಮುಂಚಿತವಾಗಿಯೇ ನಾವು ಗಮನ ಕೊಟ್ಟಿದ್ದಲ್ಲಿ ದೇಶದ ಮಧ್ಯಮ ವರ್ಗಕ್ಕೆ ಹೊರೆಯಾಗುವುದನ್ನು ತಪ್ಪಿಸಬಹುದಿತ್ತು ಎಂದು ಪ್ರಧಾನಿ ತಿಳಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮುಖಾಂತರ ಪ್ರಧಾನಿ ಅವರು ರಾಮನಾಥಪುರಂ-ತೂತುಕುಡಿ ನೈಸರ್ಗಿಕ ಅನಿಲ ಪೈಪ್‌ಲೈನ್ ಲೋಕಾರ್ಪಣೆ ಮಾಡಿದ್ದಾರೆ.