ವಾಟ್ಸಾಪ್ನ ಹೊಸ ಷರತ್ತು ಹಾಗೂ ನಿಯಮಗಳನ್ನ ಹಿಂಪಡೆಯುವಂತೆ ಸೂಚಿಸಿ ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ವಾಟ್ಸಾಪ್ ಸಿಇಓ ವಿಲ್ ಕ್ಯಾಥ್ ಕಾರ್ಟ್ಗೆ ಪತ್ರ ಬರೆದಿದೆ.
ವಾಟ್ಸಾಪ್ ನ ಬಳಕೆದಾರರ ಮಾಹಿತಿಯನ್ನ ಫೇಸ್ಬುಕ್ ಶೇರ್ ಮಾಡೋದಾಗಿ ಹೇಳಿರುವ ವಾಟ್ಸಾಪ್ನ ಹೊಸ ಸೇವಾ ನಿಯಮವನ್ನ ಹಿಂಪಡೆಯುವಂತೆ ಈ ಪತ್ರದಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
ವಾಟ್ಸಾಪ್ನ ಹೊಸ ಸೇವಾ ನಿಯಮದಿಂದಾಗಿ ಬಳಕೆದಾರರ ಡೇಟಾ ಗೌಪ್ಯತೆ, ಬಳಕೆದಾರರ ಖಾಸಗಿತನ ಮೌಲ್ಯವನ್ನ ಉಲ್ಲಂಘಿಸುತ್ತಿದೆ. ಭಾರತದಲ್ಲಿ ವಾಟ್ಸಾಪ್ ಹಾಗೂ ಫೇಸ್ಬುಕ್ ಬಳಕೆ ಮಾಡುತ್ತಿರುವ ಬೃಹತ್ ಜನಸಂಖ್ಯೆಯನ್ನ ಗಮನದಲ್ಲಿಟ್ಟುಕ್ಕೊಂಡು ಈ ಸೇವಾ ನಿಯಮ ಹಿಂಪಡೆಯುವಂತೆ ಐಟಿ ಸಚಿವಾಲಯ ಪತ್ರದಲ್ಲಿ ಉಲ್ಲೇಖಿಸಿದೆ.
ಹೊಸ ಸೇವಾ ನಿಯಮವನ್ನ ವಾಟ್ಸಾಪ್ ಪರದೆ ಮೇಲೆ ಪ್ರಕಟಿಸಿದ್ದ ವಾಟ್ಸಾಪ್ ಹೊಸ ಷರತ್ತನ್ನ ಒಪ್ಪಿಕೊಳ್ಳದೇ ಹೋದಲ್ಲಿ ಫೆಬ್ರವರಿ 8ರಿಂದ ವಾಟ್ಸಾಪ್ ಖಾತೆ ಬಂದ್ ಮಾಡೋದಾಗಿ ಎಚ್ಚರಿಕೆ ನೀಡಿತ್ತು.
ವಾಟ್ಸಾಪ್ನ ಈ ಹೊಸ ಸೇವಾ ನಿಯಮ ಒಪ್ಪದ ಅನೇಕರು ಸಿಗ್ನಲ್ ಹಾಗೂ ಟೆಲಿಗ್ರಾಂನಂತಹ ಮೆಸೇಜಿಂಗ್ ಅಪ್ಲಿಕೇಶನ್ಗಳ ಮೊರೆ ಹೋಗ್ತಿದ್ದಾರೆ. ಇದಾದ ಬಳಿಕ ಹೊಸ ಸೇವಾನಿಯಮದ ಬಗ್ಗೆ ಟ್ವಿಟರ್ ಹಾಗೂ ಸ್ಟೇಟಸ್ಗಳ ಮೂಲಕ ಸ್ಪಷ್ಟನೆ ನೀಡಿರುವ ವಾಟ್ಸಾಪ್ ಮೇ 15ರವರೆಗೆ ಹೊಸ ಸೇವಾ ನಿಯಮ ಜಾರಿಗೆ ತರೋದಿಲ್ಲ ಎಂದು ಹೇಳಿದೆ.