ಆತ್ಮ ನಿರ್ಭರ ಭಾರತದ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ 15-02-2021 5:25PM IST / No Comments / Posted In: Business, Latest News ಆತ್ಮನಿರ್ಭರ್ ಭಾರತವನ್ನ ಗಮನದಲ್ಲಿ ಇಟ್ಟುಕೊಂಡು ದೇಶದ ಮ್ಯಾಪಿಂಗ್ ನೀತಿಯಲ್ಲಿ ಕೇಂದ್ರ ಸರ್ಕಾರ ಹಲವಾರು ಬದಲಾವಣೆಗಳನ್ನ ಮಾಡಿದೆ. ಇದರಿಂದ ಭಾರತೀಯ ಕಂಪನಿಗಳಿಗೆ ಹೆಚ್ಚು ಲಾಭವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇನ್ನು ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ. ಭಾರತವನ್ನ ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವ ದೃಷ್ಟಿಯಿಂದ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಬರೆದುಕೊಂಡಿದ್ದಾರೆ . ನಮ್ಮ ಸರ್ಕಾರ ಡಿಜಿಟಲ್ ಇಂಡಿಯಾವನ್ನ ಉತ್ತೇಜಿಸುವ ಸಲುವಾಗಿ ಮಹತ್ವದ ನಿರ್ಧಾರವನ್ನ ಕೈಗೊಂಡಿದೆ. ಭೂ ಸ್ಥಾನಿಕ ಡೇಟಾದ ಸ್ವಾಧೀನ ಹಾಗೂ ಉತ್ಪಾದನೆಯನ್ನ ನಿಯಂತ್ರಿಸುವ ನೀತಿಗಳನ್ನ ಉದಾರೀಕರಣಗೊಳಿಸೋದು ಆತ್ಮ ನಿರ್ಭರ್ ಭಾರತ್ ದೃಷ್ಟಿಯಿಂದ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಟ್ವೀಟಾಯಿಸಿದ್ದಾರೆ. ನಾವು ನಮ್ಮ ಸ್ಟಾರ್ಟ್ ಅಪ್ ಹಾಗೂ ಮ್ಯಾಪಿಂಗ್ ಇನೋವೇಟರ್ಸ್ಗಳ ಮೇಲೆ ನಂಬಿಕೆ ಇಡಲಿದ್ದೇವೆ. ಇದರಿಂದ ದೇಶದಲ್ಲಿ ಅಪಾರ ಅವಕಾಶಗಳು ಜನತೆಗೆ ಸಿಗಲಿದೆ. ಇದರಿಂದ ದೇಶದಲ್ಲಿ ಉದ್ಯೋಗಗಳು ಸೃಷ್ಟಿಯಾಗಲಿವೆ ಮಾತ್ರವಲ್ಲದೇ ದೇಶದಲ್ಲಿ ಆರ್ಥಿಕತೆಯೂ ಉತ್ತಮ ಬೆಳವಣಿಗೆ ಕಾಣಲಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಅಲ್ಲದೇ ಭೂ ಸ್ಥಾನಿಕ ಡೇಟಾ ಹಾಗೂ ರಿಮೋಟ್ ಸೆನ್ಸಿಂಗ್ ಡೇಟಾ ಸಾಮರ್ಥ್ಯ ಹೆಚ್ಚಿಸೋದ್ರಿಂದ ದೇಶದ ರೈತರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ ಎಂದೂ ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ. Our government has taken a decision that will provide a huge impetus to Digital India. Liberalising policies governing the acquisition and production of geospatial data is a massive step in our vision for an Aatmanirbhar Bharat. #mapmakingsimplified https://t.co/ssbPhAeSp1 — Narendra Modi (@narendramodi) February 15, 2021