alex Certify ಬಿಗ್ ನ್ಯೂಸ್: FASTag ಗಡುವು ಮತ್ತೊಮ್ಮೆ ವಿಸ್ತರಣೆ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: FASTag ಗಡುವು ಮತ್ತೊಮ್ಮೆ ವಿಸ್ತರಣೆ..?

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆನ್​ಲೈನ್​ ಮೂಲಕ ಟೋಲ್​ ಶುಲ್ಕ ವಿಧಿಸುವ ಫಾಸ್ಟ್ಯಾಗ್ ಕಡ್ಡಾಯ​ ವ್ಯವಸ್ಥೆಯನ್ನ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜನವರಿ 1 ರಿಂದ ಫಾಸ್ಟ್​ಟ್ಯಾಗ್​​ಗಳನ್ನ ಕಡ್ಡಾಯ ಮಾಡೋದಾಗಿ ಹೇಳಿತ್ತು.

ಹೆದ್ದಾರಿಯಲ್ಲಿ ಪ್ರಯಾಣ ಮಾಡುವ ಹೆಚ್ಚಿನ ಸಂಖ್ಯೆಯ ವಾಹನ ಸವಾರರು ಇನ್ನೂ ಟೋಲ್​ಗಳಲ್ಲಿ ಶುಲ್ಕ ಪಾವತಿ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬ ವಾಹನ ಸವಾರ ಫಾಸ್ಟ್​ ಟ್ಯಾಗ್​ ಅಳವಡಿಸಿಕೊಳ್ಳಲು ಇನ್ನೂ ಒಂದು ತಿಂಗಳ ಸಮಯ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಭಾವಿಸಿದೆ ಎನ್ನಲಾಗಿದೆ.

ಟೋಲ್​ ಪ್ಲಾಜಾಗಳಲ್ಲಿ ನಗದು ವಹಿವಾಟನ್ನ ಕಡಿಮೆ ಮಾಡಲಾಗಿದ್ದು ಪ್ರತಿ ಬದಿಯಲ್ಲಿ ಒಂದು ಲೇನ್​ ಹೊರತುಪಡಿಸಿ ಮಿಕ್ಕೆಲ್ಲ ಲೇನ್​ಗಳನ್ನ ಫಾಸ್ಟ್​ಟ್ಯಾಗ್​ ವಾಹನಗಳಿಗೆ ಮೀಸಲಿಡಲಾಗಿದೆ. ಫಾಸ್ಟ್​ಟ್ಯಾಗ್​ ಇಲ್ಲದೇ ಈ ಲೇನ್​ಗಳನ್ನ ಪ್ರವೇಶಿಸುವ ಯಾವುದೇ ವಾಹನವು ಡಬಲ್​ ಶುಲ್ಕ ಪಾವತಿ ಮಾಡಬೇಕಾಗುತ್ತೆ. ಈ ಮೂಲಕ ಜನರು ಆದಷ್ಟು ಬೇಗ ಡಿಜಿಟಲ್​​ ಪೇಮೆಂಟ್​ ಕಡೆ ಮುಖ ಮಾಡಲಿ ಎಂದು ಕೇಂದ್ರ ಪ್ರಚೋದನೆ ನೀಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...