alex Certify ʼಗೂಗಲ್​​ ಮ್ಯಾಪ್ʼ ಬಳಸುವವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗೂಗಲ್​​ ಮ್ಯಾಪ್ʼ ಬಳಸುವವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಟೆಕ್​ ದೈತ್ಯ ಗೂಗಲ್​ ಸಂಸ್ಥೆ ಕೊನೆಗೂ ಗೂಗಲ್​ ಮ್ಯಾಪ್​​ನಲ್ಲಿ ಬಹು ಬೇಡಿಕೆಯ ಬದಲಾವಣೆಯನ್ನ ತರಲು ಮುಂದಾಗಿದ್ದು, ಶೀಘ್ರದಲ್ಲೇ ಗೂಗಲ್​ ಮ್ಯಾಪ್​​ನಲ್ಲಿ ಇನ್ನೂ ಗುರುತಿಸಿರದ ಹಾಗೂ ತಪ್ಪಾಗಿ ಗುರುತಿಸಲ್ಪಟ್ಟ ಸ್ಥಳಗಳನ್ನ ಬದಲಾವಣೆ ಮಾಡಬಹುದಾಗಿದೆ.

ಗೂಗಲ್​ ಬ್ಲಾಗ್​ ಪೋಸ್ಟ್​ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು ಮುಂದಿನ ಕೆಲ ತಿಂಗಳಲ್ಲೇ ವಿಶ್ವದ 80 ದೇಶಗಳಲ್ಲಿ ಈ ಹೊಸ ಸೌಲಭ್ಯ ಸಿಗಲಿದೆ ಎಂದು ಹೇಳಿದೆ.

ಪ್ರಸ್ತುತ ಕಾಣೆಯಾದ ರಸ್ತೆಗಳನ್ನ ನೀವು ಗೂಗಲ್​ ಮ್ಯಾಪ್​​ನಲ್ಲಿ ಸೇರಿಸಬೇಕೆಂದು ಪ್ರಯತ್ನಿಸಿದ್ರೆ, ಈ ಬಗ್ಗೆ ಪಿನ್​ ಮಾಡಿ ರಸ್ತೆಯ ಬಗ್ಗೆ ಮಾಹಿತಿಯನ್ನ ಗೂಗಲ್​​ಗೆ ಸಲ್ಲಿಸಬಹುದಾಗಿದೆ.

ಆದರೆ ಹೊಸ ಟೂಲ್​ನ ಸಹಾಯದಿಂದ ನಾಪತ್ತೆಯಾದ ರಸ್ತೆಗಳನ್ನ ಸೇರಿಸೋದ್ರ ಜೊತೆಗೆ ರಸ್ತೆಯ ದಿಕ್ಕುಗಳನ್ನ ಸರಿಪಡಿಸಲೂ ಆಗುವಂತೆ ಮಾಡಲು ಗೂಗಲ್​ ಪ್ರಯತ್ನಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...