ಗೂಗಲ್ ಕ್ರೋಮ್ ಹೊಸ ಅಪ್ಡೇಟ್ ತಂದಿದ್ದು ಇದರಿಂದಾಗಿ ವೆಬ್ ಬ್ರೌಸರ್ನ ಕಾರ್ಯಕ್ಷಮತೆ ವೇಗವಾಗ್ತಿರೋದ್ರ ಜೊತೆಗೆ ಮೊದಲಿನಿಗಿಂತ ಹೆಚ್ಚು ಸುರಕ್ಷಿತವಾಗಿದೆ.
ಈ ವೆಬ್ ಬ್ರೌಸರ್ ಹೆಚ್ಟಿಟಿಪಿ ಬದಲಾಗಿ ಹೆಚ್ಟಿಟಿಪಿಎಸ್ನ್ನ ಬಳಕೆ ಮಾಡಲಿದ್ದು, ಇದರಿಂದ ಬ್ರೌಸರ್ ಸುರಕ್ಷಿತವಾಗಿ ಕಾರ್ಯ ನಿರ್ವಹಿಸಲಿದೆ. ಹೆಚ್ಟಿಟಿಪಿ ಅಂದರೆ – Hypertext Transfer Protocol ಆಗಿದ್ದು ಎಸ್ – ಎಂದರೆ Secure ಎಂದಾಗಿದೆ.
ಎಲ್ಲಾ ಅಡ್ರೆಸ್ ಬಾರ್ಗಳು ಸ್ವಯಂಚಾಲಿತವಾಗಿ https: // ಪ್ರೊಟೋಕಾಲ್ ಪಡೆಯುತ್ತಿದೆ ಎಂದು ಗೂಗಲ್ ಕ್ರೋಂ ಕ್ರೋಮಿಯಂ ಬ್ಲಾಗ್ ಪೋಸ್ಟ್ ಮೂಲಕ ಸ್ಪಷ್ಟ ಸಂದೇಶ ನೀಡಿದೆ.
ಬಳಕೆದಾರರು ನಿರ್ದಿಷ್ಟ ವೆಬ್ಸೈಟ್ಗೆ ಭೇಟಿ ನೀಡಿದರೆ ಅಡ್ರೆಸ್ ಬಾರ್ನಲ್ಲಿ ಹೆಚ್ಟಿಟಿಪಿ ಬದಲಾಗಿ ಹೆಚ್ಟಿಟಿಪಿಎಸ್ ಆಯ್ಕೆ ಆಗಲಿದೆ.
ಈ ಸುರಕ್ಷಿತ ಬ್ರೌಸಿಂಗ್ನಿಂದ ನಿಮಗೆ ಅಪಾಯಕಾರಿ ಸೈಟ್ಗಳಿಂದ ಎಚ್ಚರಿಕೆ ಸಿಗಲಿದೆ. ಸ್ಪ್ಯಾಮ್ ಫೈಲ್ಗಳನ್ನ ನೀವು ಡೌನ್ಲೋಡ್ ಮಾಡುವ ಮುನ್ನ ನಿಮಗೆ ಎಚ್ಚರಿಕೆಯನ್ನ ನೀಡಲಾಗುತ್ತೆ.