ನವದೆಹಲಿ: ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಆರ್.ಟಿ.ಒ. ಕಚೇರಿ 18 ಸೇವೆಗಳು ಇನ್ನುಮುಂದೆ ಆನ್ಲೈನ್ನಲ್ಲಿ ಲಭ್ಯವಿರುತ್ತವೆ.
ಚಾಲನಾ ಪರವಾನಿಗೆ, ವಾಹನ ಪರವಾನಿಗೆ, ನವೀಕರಣ, ನೋಂದಣಿ ಮೊದಲಾದ ಕಾರ್ಯಗಳಿಗೆ ಸಾರಿಗೆ ಇಲಾಖೆ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ. ಆಧಾರ್ ಆಧಾರಿತ 18 ಸೇವೆಗಳಿಗೆ ಕೇಂದ್ರ ಸಂಚಾರ ಮತ್ತು ಹೆದ್ದಾರಿ ಸಚಿವಾಲಯ ಆನ್ಲೈನ್ ನಲ್ಲಿ ಸೇವೆ ನೀಡಲು ಮುಂದಾಗಿದೆ.
ಆರ್ಟಿಓ ಕಚೇರಿಗಳಲ್ಲಿ ಪಾರದರ್ಶಕ ಆಡಳಿತ ತರಲು ಆಧಾರ್ ಆಧಾರಿತ 18 ಸೇವೆಗಳಿಗೆ ಅವಕಾಶ ನೀಡಲಾಗಿದೆ. ಯಾವುದೇ ಮಧ್ಯವರ್ತಿಯ ನೆರವಿಲ್ಲದೆ ನೇರವಾಗಿ ಸರಳವಾಗಿ ಸೇವೆ ಪಡೆಯಬಹುದಾಗಿದೆ. ವಾಹನ ಕಲಿಕಾ ಪರವಾನಿಗೆ, ಡಿಎಲ್, ನವೀಕರಣ, ನೋಂದಣಿ ವಿಳಾಸ ಬದಲು ಮೊದಲಾದ 18 ಸೇವೆಗಳನ್ನು ಮನೆಯಲ್ಲೇ ಕುಳಿತು ಆಧಾರ್ ಒಟಿಪಿಯೊಂದಿಗೆ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.