alex Certify ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್: ಕಂಪನಿ ಬದಲಿಸಿದ್ರೆ ಗ್ರಾಚ್ಯುಟಿ ವರ್ಗಾವಣೆ ಆಯ್ಕೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್: ಕಂಪನಿ ಬದಲಿಸಿದ್ರೆ ಗ್ರಾಚ್ಯುಟಿ ವರ್ಗಾವಣೆ ಆಯ್ಕೆ ಅವಕಾಶ

ನವದೆಹಲಿ: ಕಾರ್ಮಿಕರಿಗೆ ಅನುಕೂಲವಾಗುವಂತೆ ಶೀಘ್ರದಲ್ಲೇ ಹೊಸ ವ್ಯವಸ್ಥೆಯನ್ನು ಆರಂಭಿಸಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ.

ವೇತನ ಪಡೆಯುವ ಕಾರ್ಮಿಕರು ನೌಕರರ ಭವಿಷ್ಯ ನಿಧಿ ಅನ್ವಯ ಉದ್ಯೋಗ ಬದಲಿಸಿದಾಗ ಗ್ರಾಚ್ಯುಟಿ ವರ್ಗಾವಣೆಯ ಅವಕಾಶ ಪಡೆಯಬಹುದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ, ನೌಕರರ ಸಂಘ ಮತ್ತು ಉದ್ಯಮದ ನಡುವೆ ಇರುವ ಗ್ರಾಚ್ಯುಟಿ ರಚನೆಯನ್ನು ಬದಲಾವಣೆ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಗ್ರಾಚ್ಯುಟಿ ವರ್ಗಾವಣೆಯನ್ನು ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ನಿಯಮಗಳಲ್ಲಿ ಸೇರಿಸಲಾಗುವುದು.

ಈಗಿರುವ ಭವಿಷ್ಯನಿಧಿ ಅನ್ವಯ ಉದ್ಯೋಗದಾತರಿಗೆ ಗ್ರಾಚ್ಯುಟಿ ವರ್ಗಾವಣೆಯ ಆಯ್ಕೆಯನ್ನು ಪಡೆಯಲಾಗುತ್ತದೆ. ಉದ್ಯೋಗ ಬದಲಾವಣೆ ಮಾಡಿಕೊಂಡ ಸಂದರ್ಭದಲ್ಲಿ ವರ್ಗಾವಣೆ ವ್ಯವಸ್ಥೆ ಅನ್ವಯವಾಗಲಿದೆ. ಪಿಎಫ್ ನಂತೆಯೇ ಪ್ರತಿತಿಂಗಳು ಗ್ರಾಚ್ಯುಟಿ ಕೊಡುಗೆಯನ್ನು ಸಹ ಒಪ್ಪಿಕೊಳ್ಳಲಾಗಿದೆ. ಕಾರ್ಮಿಕ ಸಚಿವಾಲಯ, ಕೇಂದ್ರ ಕೈಗಾರಿಕೆ ಸಭೆಯಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ನಿಬಂಧನೆಯನ್ನು ಸಾಮಾಜಿಕ ಭದ್ರತಾ ಸಮಿತಿಯ ನಿಯಮದಲ್ಲಿ ಸೇರಿಸಲಾಗುವುದು. ಏಪ್ರಿಲ್, 2021 ರಲ್ಲಿ ಅಂತಿಮ ಅಧಿಸೂಚನೆ ಹೊರ ಬರುವ ನಿರೀಕ್ಷೆಯಿದೆ.

ಗ್ರಾಚುಟಿಗಾಗಿ ಕೆಲಸದ ದಿನಗಳನ್ನು ವಿಸ್ತರಿಸಲು ಉದ್ಯಮಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಕಂಪನಿಯಲ್ಲಿ 5 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡುವ ನೌಕರನ ಸಂಬಳ, ಪಿಂಚಣಿ ಮತ್ತು ಭವಿಷ್ಯನಿಧಿಯನ್ನು ಹೊರತುಪಡಿಸಿದ ಗ್ರಾಚ್ಯುಟಿ ಪಡೆಯಲಾಗುತ್ತದೆ. ಗ್ರಾಚ್ಯುಟಿಯ ಒಂದು ಸಣ್ಣ ಭಾಗ ವೇತನದಿಂದ ಕಡಿತಗೊಳ್ಳುತ್ತದೆ. ಅದೇ ಸಮಯದಲ್ಲಿ ಕಂಪನಿ ಹೆಚ್ಚಿನ ಭಾಗವನ್ನು ನೀಡುತ್ತದೆ.

ಗ್ರ್ಯಾಚುಟಿ ಪ್ರಮಾಣವನ್ನು ಈ ರೀತಿ ನಿಗದಿಪಡಿಸಲಾಗಿದೆ

ಉದ್ಯೋಗಿ ಒಂದೇ ಕಂಪನಿಯಲ್ಲಿ ಎಷ್ಟು ವರ್ಷ ಕೆಲಸ ಮಾಡಿದ್ದಾರೆ. ಅದೇ ಕಂಪನಿಯಲ್ಲಿ ಕನಿಷ್ಠ 5 ವರ್ಷಗಳ ಕಾಲ ಕೆಲಸ ಮಾಡುವ ವ್ಯಕ್ತಿಗೆ ಗ್ರಾಚ್ಯುಟಿ ಸಿಗುತ್ತದೆ.

ಪ್ರಸ್ತುತ, ಗ್ರಾಚ್ಯುಟಿ ಸರಿಪಡಿಸಲು ಸ್ಥಿರ ಸೂತ್ರವಿದೆ. ಅದರಂತೆ, (ಕೊನೆಯ ಸಂಬಳ) x (15/26) x (5) = ಗ್ರಾಚ್ಯುಟಿ ಮೊತ್ತ. ಉದಾಹರಣೆಗೆ ಉದ್ಯೋಗಿಯೊಬ್ಬರ ಕೊನೆಯ ವೇತನ 50 ಸಾವಿರ ರೂಪಾಯಿಗಳು ಇದ್ದರೆ ಆಗ ಅವನ ಗ್ರಾಚ್ಯುಟಿ(50,000) x (15/26) x (5) = 1,44,230 ರೂ. ಇಲ್ಲಿ ತಿಂಗಳಲ್ಲಿ ಕೇವಲ 26 ದಿನಗಳನ್ನು ಮಾತ್ರ ಕೆಲಸದ ದಿನಗಳೆಂದು 4 ದಿನಗಳು ರಜಾದಿನವೆಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ ಗ್ರಾಚ್ಯುಟಿಯನ್ನು ವರ್ಷದಲ್ಲಿ 15 ದಿನಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಎರಡನೆಯದಾಗಿ, ಅವರ ಕೊನೆಯ ಸಂಬಳದಲ್ಲಿ ಮೂಲ ವೇತನ ಮತ್ತು ಡಿಎ ಭತ್ಯೆ ಎಷ್ಟು ಎಂಬುದನ್ನು ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...