ತನ್ನ ಗ್ರಾಹಕರಿಗೆ ಒಳ್ಳೆ ಸುದ್ದಿ ಕೊಟ್ಟಿರುವ ಕೆನರಾ ಬ್ಯಾಂಕ್, ಸಾಲ/ ಮುಂಗಡದ ಮೇಲಿನ ಬಡ್ಡಿ ಆಧರಿತ ಕಿರು ವೆಚ್ಚದಲ್ಲಿ (ಎಂಸಿಎಲ್‌ಆರ್) 10 ಮೂಲಾಂಶಗಳನ್ನು ತಗ್ಗಿಸಿರುವ ಕಾರಣ, ಸಾಲದ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಿದೆ.
ಒಂದು ತಿಂಗಳ ಎಂಸಿಎಲ್‌ಆರ್ ದರ ಈಗ 6.7% ದಷ್ಟಿದ್ದು, ಮೂರು ತಿಂಗಳ ಮಟ್ಟಿಗೆ ಈ ದರವು 6.95%ನಷ್ಟಿದ್ದರೆ, ಆರು ತಿಂಗಳ ಬಡ್ಡಿ ಮೇಲೆ 7.3% ತಲುಪಿದ್ದು, ಒಂದು ವರ್ಷದ ಅವಧಿಗೆ 7.35%ರಷ್ಟು ಇರಲಿದೆ.
ಕೇಂದ್ರ ಸರ್ಕಾರದ ಸೂಚನೆಗೂ ನಿರ್ಲಕ್ಷ…! ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಗೆ ಎದುರಾಯ್ತು ಸಂಕಷ್ಟ
ತನ್ನ ದ್ವೈಮಾಸಿಕ ಹಣಕಾಸು ನೀತಿಯನುಸಾರ ರೆಪೋ ಮೇಲಿನ ಬಡ್ಡಿದರಗಳನ್ನು ಏರಿಕೆ ಮಾಡದಿರಲು ಆರ್‌ಬಿಐ ನಿರ್ಧರಿಸಿದೆ. ಫೆಬ್ರವರಿ 5ರಂದು ಘೋಷಿಸಲಾದ ಹೊಸ ನೀತಿಯನುಸಾರ ರೆಪೋ ದರವು 4%ನಲ್ಲೇ ಮುಂದುವರೆಯಲಿದೆ.
2021-22ರ ಕೇಂದ್ರ ಬಜೆಟ್ ಘೋಷಣೆಯಾದ ಬಳಿಕ ಆರ್‌ಬಿಐ ಇದೇ ಮೊದಲ ಬಾರಿಗೆ ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಘೋಷಿಸುತ್ತಿದೆ.