alex Certify ಹೊಸ ವರ್ಷಕ್ಕೆ ಶುಭ ಸುದ್ದಿ: EPFO ಚಂದಾದಾರರ ಖಾತೆಗೆ ಹಣ ಜಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷಕ್ಕೆ ಶುಭ ಸುದ್ದಿ: EPFO ಚಂದಾದಾರರ ಖಾತೆಗೆ ಹಣ ಜಮಾ

ನವದೆಹಲಿ: ಇಪಿಎಫ್ಒ ಚಂದಾದಾರರಿಗೆ ಸಿಹಿ ಸುದ್ದಿ ಸಿಕ್ಕಿದ್ದು, 6 ಕೋಟಿ ಸದಸ್ಯರಿಗೆ ನೌಕರರ ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ 2019 -20 ನೇ ಸಾಲಿನ ನೌಕರರ ಭವಿಷ್ಯ ನಿಧಿ ಶೇಕಡ 8.5 ರಷ್ಟು ಬಡ್ಡಿದರವನ್ನು ಜಮಾ ಮಾಡಲು ಆರಂಭಿಸಿದೆ.

ಹೊಸವರ್ಷದ ವೇಳೆಯಲ್ಲಿಯೇ ಇಪಿಎಫ್ಒ ತನ್ನ ಆರು ಕೋಟಿ ಸದಸ್ಯರಿಗೆ ಬಡ್ಡಿ ದರ ನೀಡುತ್ತಿದೆ. ಕಾರ್ಮಿಕ ಸಚಿವಾಲಯ ಈಗಾಗಲೇ 2019 -20 ನೇ ಸಾಲಿನ ಇಪಿಎಫ್ ಮೇಲಿನ ಶೇಕಡ 8.5 ರಷ್ಟು ಬಡ್ಡಿಯನ್ನು ಜಮಾ ಮಾಡಲು ನಿರ್ದೇಶನ ನೀಡಿದೆ.

ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಈ ಕುರಿತು ಮಾಹಿತಿ ನೀಡಿದ್ದು, ಗುರುವಾರದಿಂದ ಚಂದಾದಾರರ ಖಾತೆಗೆ ಬಡ್ಡಿದರ ಪಾವತಿಗೆ ಚಾಲನೆ ನೀಡಲಾಗಿದೆ. ಡಿಸೆಂಬರ್ 31 ರಂದು ನಿವೃತ್ತಿ ಹೊಂದುವ ಎಲ್ಲಾ ಸದಸ್ಯರು ಶೇಕಡ 8.5 ರಷ್ಟು ಬಡ್ಡಿದರವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ಹೇಳಿದ್ದಾರೆ.

ಕಳೆದ ಮಾರ್ಚ್‌ನಲ್ಲಿ, ಗಂಗ್ವಾರ್ ನೇತೃತ್ವದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು 2019-20ನೇ ಸಾಲಿನ ಇಪಿಎಫ್‌ಗೆ ಶೇ .8.5 ರಷ್ಟು ಬಡ್ಡಿದರವನ್ನು ಅನುಮೋದಿಸಿತ್ತು. ಸೆಪ್ಟೆಂಬರ್‌ನಲ್ಲಿ, ಇಪಿಎಫ್‌ಒ ಟ್ರಸ್ಟಿಗಳ ಸಭೆಯಲ್ಲಿ ಶೇ .8.5 ರಷ್ಟು ಬಡ್ಡಿಯನ್ನು ಎರಡು ಕಂತುಗಳಾಗಿ ಶೇ 8.15 ಮತ್ತು ಶೇ 0.35 ರಂತೆ ವಿಂಗಡಿಸಲು ನಿರ್ಧರಿಸಿತ್ತು. ಆದರೆ, ನಂತರ ಸಚಿವಾಲಯವು ಒಂದೇ ಕಂತಿನಲ್ಲಿ ಚಂದಾದಾರರ ಖಾತೆಗಳಿಗೆ ಜಮಾ ಮಾಡಲು ನಿರ್ಧರಿಸಿದ್ದು, ಗುರುವಾರದಿಂದಲೇ ಜಮಾ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...