ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದ್ದು ಒಂದು ಗ್ರಾಂ ಚಿನ್ನದ ಬೆಲೆ 4,607 ರೂಪಾಯಿ ದಾಖಲಾಗಿದೆ. ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,070 ರೂಪಾಯಿ ಆಗಿದೆ. ಬೆಳ್ಳಿ ದರ ಕೆಜಿಗೆ 48,370 ರೂಪಾಯಿ ಇದೆ.
ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 44,250 ರೂ.ಇದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 45,900 ರೂ. ಇದೆ. ಬೆಳ್ಳಿ ದರ ಕೆಜಿಗೆ 48,370 ರೂ. ಆಗಿದೆ.
ಅದೇ ರೀತಿ ಕೊಲ್ಕತ್ತಾದಲ್ಲಿ 10 ಗ್ರಾಂ ಆಭರಣ ಚಿನ್ನದ ಬೆಲೆ 45,900 ರೂ., ಚೆನ್ನೈನಲ್ಲಿ ಚಿನ್ನ 10 ಗ್ರಾಂಗೆ 45,120 ರೂ. ಇದೆ. ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಆಧರಿಸಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಳಿತವಾಗುತ್ತಿದ್ದು, ಮಂಗಳವಾರದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ ಎನ್ನಲಾಗಿದೆ.