ಇಂದು ಷೇರು ಮಾರುಕಟ್ಟೆ ಮಾತ್ರವಲ್ಲ ಬಂಗಾರದ ಬೆಲೆಯಲ್ಲೂ ಇಳಿಕೆ ಕಂಡು ಬಂದಿದೆ.
ಆದ್ರೆ ಬೆಳ್ಳಿ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಚಿನ್ನದ ಬೆಲೆ ಸತತ ಐದನೇ ದಿನ ಇಳಿಕೆ ಕಂಡಿದೆ.
ಎಂಸಿಎಕ್ಸ್ ನಲ್ಲಿ, ಏಪ್ರಿಲ್ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.27ರಷ್ಟು ಇಳಿಕೆ ಕಂಡಿದ್ದು, 10 ಗ್ರಾಂ ಚಿನ್ನದ ಬೆಲೆ 46772 ಕ್ಕೆ ತಲುಪಿದೆ. ಇದು ಜೂನ್ ನಂತರದ ಕನಿಷ್ಠ ಮಟ್ಟದ ಕುಸಿತವಾಗಿದೆ.
ಬೆಳ್ಳಿ ಬೆಲೆ ಪ್ರತಿ ಕೆಜಿಗೆ 69,535 ರೂಪಾಯಿಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಾದ ಕುಸಿತ ಮತ್ತು ಬಜೆಟ್‌ನಲ್ಲಿ ಆಮದು ಸುಂಕ ಕಡಿತ ಭಾರತದಲ್ಲಿ ಚಿನ್ನದ ದರ ಇಳಿಯಲು ಕಾರಣವಾಗಿದೆ. ಆಗಸ್ಟ್ ನಲ್ಲಿ ಚಿನ್ನವು 10 ಗ್ರಾಂಗೆ 56,200 ರೂಪಾಯಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು. ಆಗಸ್ಟ್ ನಿಂದ ಇಲ್ಲಿಯವರೆಗೆ ಚಿನ್ನದ ಬೆಲೆ ಸುಮಾರು 9400 ರೂಪಾಯಿ ಅಗ್ಗವಾಗಿದೆ.
ʼವ್ಯಾಲೆಂಟೈನ್ಸ್ʼ ದಿನ ಪತ್ನಿ ಕೊಟ್ಟ ವಿಚಿತ್ರ ಗಿಫ್ಟ್ ಕಂಡು ದಂಗಾದ ಪತಿ
ಬೆಳ್ಳಿ ಕೂಡ ಆಗಸ್ಟ್ ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಪ್ರತಿ ಕೆ.ಜಿ.ಗೆ ಬೆಳ್ಳಿ ಬೆಲೆ 77,840 ರೂಪಾಯಿಯಾಗಿತ್ತು. ಅಂದಿನಿಂದ ಬೆಳ್ಳಿ ಸುಮಾರು 8300 ರೂಪಾಯಿಗಳಷ್ಟು ಅಗ್ಗವಾಗಿದೆ. ಆಗಸ್ಟ್ ನಲ್ಲಿಯೇ ಚಿನ್ನದ ಬೆಲೆ ಇಳಿಯಲು ಶುರುವಾಗಿತ್ತು. ಕೊರೊನಾ ಲಸಿಕೆ ಬರ್ತಿದ್ದಂತೆ ಜನರು ಷೇರುಮಾರುಕಟ್ಟೆಯತ್ತ ಮತ್ತೆ ಮುಖ ಮಾಡಿದ್ದರಿಂದ ಚಿನ್ನದ ಬೆಲೆ ಇಳಿಕೆ ಕಾಣಲು ಶುರುವಾಗಿತ್ತು.