alex Certify ಭರ್ಜರಿ ಗುಡ್ ನ್ಯೂಸ್: ಚಿನ್ನದ ದರ 10,500 ರೂ. ಇಳಿಕೆ, ಆಗಸ್ಟ್ ನಲ್ಲಿ 57 ಸಾವಿರ ರೂ. – ಇಂದು 46,307 ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಗುಡ್ ನ್ಯೂಸ್: ಚಿನ್ನದ ದರ 10,500 ರೂ. ಇಳಿಕೆ, ಆಗಸ್ಟ್ ನಲ್ಲಿ 57 ಸಾವಿರ ರೂ. – ಇಂದು 46,307 ರೂ.

ನವದೆಹಲಿ: ಬುಧವಾರ ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಕೆಲವು ತಿಂಗಳ ಹಿಂದೆ ಕಳೆದ ಆಗಸ್ಟ್ ನಲ್ಲಿ  ದಾಖಲೆಯ 57 ಸಾವಿರ ರೂಪಾಯಿವರೆಗೂ ಮಾರಾಟವಾಗಿದ್ದ ಚಿನ್ನದ ದರ ಇತ್ತೀಚಿನ ದಿನಗಳಲ್ಲಿ ಇಳಿಕೆಯ ಹಾದಿಯಲ್ಲಿದೆ.

ಆಗಸ್ಟ್ ನಿಂದ ಇಂದಿನವರೆಗೆ ಚಿನ್ನದ ದರದಲ್ಲಿ 10,500 ರೂ. ನಷ್ಟು ಕಡಿಮೆಯಾಗಿದೆ. ಬುಧವಾರ 10 ಗ್ರಾಂ ಚಿನ್ನದ ದರ 148 ರೂಪಾಯಿ ಕಡಿಮೆಯಾಗಿದೆ. ಈ ಮೂಲಕ 46,455 ಇದ್ದ ಚಿನ್ನದ ದರ 46,307 ರೂಪಾಯಿಗೆ ಇಳಿಕೆಯಾಗಿದೆ.

ಅದೇ ರೀತಿ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 866 ರೂಪಾಯಿ ಕಡಿಮೆಯಾಗಿದೆ. 69,562 ರೂಪಾಯಿ ಇದ್ದ ಒಂದು ಕೆಜಿ ಬೆಳ್ಳಿ ದರ 68,676 ರೂಪಾಯಿಗೆ ಇಳಿಕೆಯಾಗಿದೆ. ಕೆಲ ತಿಂಗಳ ಹಿಂದೆ 1 ಕೆಜಿ ಬೆಳ್ಳಿ ದರ 70 ಸಾವಿರ ರೂ.ಗಿಂತಲೂ ಅಧಿಕವಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...