alex Certify ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್‌: ʼಚಿನ್ನʼದ ಬೆಲೆಯಲ್ಲಿ ಇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್‌: ʼಚಿನ್ನʼದ ಬೆಲೆಯಲ್ಲಿ ಇಳಿಕೆ

ಸೋಮವಾರ ಏರಿಕೆ ಕಂಡಿದ್ದ ಚಿನ್ನ-ಬೆಳ್ಳಿ ಬೆಲೆ ಮಂಗಳವಾರ ಇಳಿಕೆ ಕಂಡಿದೆ. ನಿನ್ನೆ ಚಿನ್ನದ ಬೆಲೆ 600 ರೂಪಾಯಿ ಏರಿಕೆ ಕಂಡಿತ್ತು. ಬೆಳ್ಳಿ ಬೆಲೆ 2470 ರೂಪಾಯಿ ಏರಿಕೆ ಕಂಡಿತ್ತು. ಇಂದು ಚಿನ್ನದ ಬೆಲೆ 10 ಗ್ರಾಂಗೆ 160 ರೂಪಾಯಿ ಇಳಿಕೆ ಕಂಡು ವಹಿವಾಟು ನಡೆಸುತ್ತಿದೆ. ಚಿನ್ನದ ಬೆಲೆ 10 ಗ್ರಾಂಗೆ 47100 ರೂಪಾಯಿಯಾಗಿದೆ.

ಕಳೆದ ವರ್ಷ ಕೊರೊನಾ ಬಿಕ್ಕಟ್ಟಿನಿಂದಾಗಿ, ಜನರು ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡಿದ್ದರು. ಆಗಸ್ಟ್ 2020 ರಲ್ಲಿ, ಎಂಸಿಎಕ್ಸ್ ನಲ್ಲಿ 10 ಗ್ರಾಂ ಚಿನ್ನದ ಬೆಲೆ 56191 ರೂಪಾಯಿಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಚಿನ್ನವು ಶೇಕಡಾ 25 ರಷ್ಟು ಇಳಿಕೆ ಕಂಡಿದೆ. ಎಂಸಿಎಕ್ಸ್ ನಲ್ಲಿ ಚಿನ್ನವು 10 ಗ್ರಾಂಗೆ 47100 ರೂಪಾಯಿಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದ್ರೆ 9100 ರೂಪಾಯಿಗಿಂತ ಅಗ್ಗವಾಗಿದೆ.

ಬೆಳ್ಳಿ ಸೋಮವಾರ 2460 ರೂಪಾಯಿ ಏರಿಕೆಯೊಂದಿಗೆ ಕೆ.ಜಿಗೆ 70,000 ರೂಪಾಯಿಯಾಗಿತ್ತು. ಇಂದು ಎಂಸಿಎಕ್ಸ್ ನಲ್ಲಿ ಬೆಳ್ಳಿ ಬೆಲೆ ಕುಸಿತ ಕಂಡಿದೆ. 170 ರೂಪಾಯಿ ಇಳಿಕೆ ಕಂಡಿರುವ ಬೆಳ್ಳಿ ಪ್ರತಿ ಕೆ.ಜಿ.ಗೆ 69700 ರೂಪಾಯಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...