alex Certify ಚಿನ್ನಾಭರಣ ಖರೀದಿದಾರರಿಗೆ ಮತ್ತೆ ಶಾಕ್: ಷೇರು ಕುಸಿತ, ಚಿನ್ನದ ದರ ಹೆಚ್ಚಳ – 10 ಗ್ರಾಂಗೆ 770 ರೂ.ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನಾಭರಣ ಖರೀದಿದಾರರಿಗೆ ಮತ್ತೆ ಶಾಕ್: ಷೇರು ಕುಸಿತ, ಚಿನ್ನದ ದರ ಹೆಚ್ಚಳ – 10 ಗ್ರಾಂಗೆ 770 ರೂ.ಏರಿಕೆ

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಆದ ಬದಲಾವಣೆಯಿಂದ ಚಿನ್ನದ ದರ ಹೆಚ್ಚಳವಾಗಿದೆ. ಷೇರು ಸೂಚ್ಯಂಕ ಕುಸಿತವಾಗುತ್ತಿದ್ದಂತೆ ಬಂಗಾರದ ಬೆಲೆ ಏರುಗತಿಯಲ್ಲಿ ಸಾಗಿದೆ.

ಚಿನ್ನದ ದರ 10 ಗ್ರಾಂಗೆ 770 ರೂಪಾಯಿ ಹೆಚ್ಚಳವಾಗಿದೆ. 24 ಕ್ಯಾರೆಟ್ ಚಿನ್ನದ ದರ ಬೆಂಗಳೂರಿನಲ್ಲಿ 48,160 ರೂಪಾಯಿಗೆ ತಲುಪಿದೆ. ಅದೇ ರೀತಿ 22 ಕ್ಯಾರೆಟ್ ಚಿನ್ನದ ದರ 44,850 ರೂಪಾಯಿಗೆ ಹೆಚ್ಚಳವಾಗಿದೆ.

ಬೆಳ್ಳಿ ದರ ಕೆಜಿಗೆ 200 ಹೆಚ್ಚಳವಾಗಿದ್ದು, 68,800 ರೂ. ತಲುಪಿದೆ. ಷೇರು ಸೂಚ್ಯಂಕ ಕುಸಿತವಾಗುತ್ತಿರುವುದರಿಂದ ಹೂಡಿಕೆದಾರರು ಸುರಕ್ಷಿತವಾಗಿರುವ ಬಂಗಾರದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿರುವ ಕಾರಣ ಬಂಗಾರದ ಬೆಲೆ ಏರುಗತಿಯಲ್ಲಿ ಸಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...