ಚಿನ್ನಾಭರಣಗಳಿಗೆ ಹಾಲ್ಮಾರ್ಕ್ ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ವಿಶಿಷ್ಟ ಸಂಖ್ಯೆ(ಯುಐಡಿ) ಕೂಡ ಕಡ್ಡಾಯವಾಗಲಿದೆ. ವಾಹನಗಳಿಗೆ ನೋಂದಣಿ ಸಂಖ್ಯೆ ಇರುವಂತೆಯೇ ಎರಡು ಗ್ರಾಂಗಳಿಗಿಂತ ಹೆಚ್ಚಿನ ತೂಕದ ಚಿನ್ನಾಭರಣಗಳಿಗೆ ವಿಶಿಷ್ಟ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ಭಾರತ ಮಾನಕ ಸಂಸ್ಥೆಯು ಈ ಕಾನೂನು ಜಾರಿಗೆ ಮುಂದಾಗಿದ್ದು, ಚಿನ್ನಾಭರಣ ವರ್ತಕರು, ತಯಾರಕರು ತಮ್ಮಲ್ಲಿ ತಯಾರಾದ, ಮಾರಾಟವಾದ ಮತ್ತು ಉಳಿದ ಚಿನ್ನಾಭರಣಗಳು ಎಷ್ಟು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಭಾರತೀಯ ಮಾನಕ ಸಂಸ್ಥೆಗೆ ನೀಡಬೇಕಿದೆ.
ವಾಹನಗಳಿಗೆ ನೋಂದಣಿ ಸಂಖ್ಯೆ ಇರುವ ಮಾದರಿಯಲ್ಲಿ 2 ಗ್ರಾಂಗಳಿಗಿಂತ ಹೆಚ್ಚಿನ ಪ್ರತಿ ಚಿನ್ನಾಭರಣಕ್ಕೆ ವಿಶಿಷ್ಟ ಐಡಿ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಲಾಗಿದೆ.