alex Certify ಆಭರಣ‌ ಪ್ರಿಯರಿಗೆ ಬಿಗ್‌ ಶಾಕ್: ಒಂದು ವರ್ಷದಲ್ಲಿ ಮುಗಿಲು ಮುಟ್ಟಲಿದೆ ಚಿನ್ನದ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಭರಣ‌ ಪ್ರಿಯರಿಗೆ ಬಿಗ್‌ ಶಾಕ್: ಒಂದು ವರ್ಷದಲ್ಲಿ ಮುಗಿಲು ಮುಟ್ಟಲಿದೆ ಚಿನ್ನದ ಬೆಲೆ

ಚಿನ್ನದ ಹೂಡಿಕೆ ಮಾಡುವವರು ಈ ವರ್ಷ ಸಾಕಷ್ಟು ಏರುಪೇರುಗಳನ್ನು ನೋಡುವಂತಾಗಿದೆ. ಹಿಂದಿನ ವರ್ಷದ ಅಂತ್ಯದಲ್ಲಿ ಅಂದ್ರೆ ಕೊರೊನಾ ಕಡಿಮೆಯಾಗ್ತಿರುವ ಸಂದರ್ಭದಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿತ್ತು. ಹಾಗಾಗಿ ಚಿನ್ನದ ಬೆಲೆ ಕಡಿಮೆಯಾಗಿತ್ತು. ಆದ್ರೆ 2021ರಲ್ಲಿ ಕೊರೊನಾ ಹೆಚ್ಚಾಗ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ.

ಈ ವರ್ಷ ಚಿನ್ನವು 10 ಗ್ರಾಂಗೆ 56,500 ರೂಪಾಯಿಯಾಗಲಿದೆ ಎಂದು ಮೋತಿಲಾಲ್ ಓಸ್ವಾಲ್ ಇನ್ವೆಸ್ಟ್ಮೆಂಟ್ ಸರ್ವೀಸಸ್ ನ ವಿಶ್ಲೇಷಕರು ತಿಳಿಸಿದ್ದಾರೆ. ಎಂಸಿಎಕ್ಸ್ ನಲ್ಲಿನ ಚಿನ್ನ ಪ್ರಸ್ತುತ 10 ಗ್ರಾಂಗೆ 47500 ರೂಪಾಯಿಯಾಗಿದೆ. 2020ರ ಆಗಸ್ಟ್ ನಲ್ಲಿ ಚಿನ್ನವು 10 ಗ್ರಾಂಗೆ ದಾಖಲೆಯ ಗರಿಷ್ಠ 56200 ರೂಪಾಯಿಯಾಗಿತ್ತು. ಈ ವರ್ಷ ಆಗಸ್ಟ್ ವೇಳೆಗೆ ಚಿನ್ನದ ಬೆಲೆ ಹಿಂದಿನ ದಾಖಲೆ ಮುರಿಯುವ ಸಾಧ್ಯತೆಯಿದೆ.

ಹೆಚ್ಚುತ್ತಿರುವ ಕೊರೊನಾ ವೈರಸ್, ಹಣದುಬ್ಬರ, ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ, ಯುಎಸ್-ಚೀನಾ ಮಧ್ಯೆ ವ್ಯಾಪಾರ ಯುದ್ಧ ಇವೆಲ್ಲವೂ ಬಂಗಾರ ಬೆಲೆ ಹೆಚ್ಚಾಗಲು ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಚಿನ್ನವು 51,700 ರೂಪಾಯಿ ಮುಟ್ಟಲಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...