ನವದೆಹಲಿ: ಚಿನ್ನಾಭರಣಗಳಿಗೆ ಜೂನ್ 1 ರಿಂದ ಹಾಲ್ಮಾರ್ಕ್ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಚಿನ್ನಾಭರಣ ವರ್ತಕರು ಭಾರತೀಯ ಮಾನಕ ಸಂಸ್ಥೆ(ಬಿಐಎಸ್) ನೊಂದಿಗೆ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ.
ಚಿನ್ನದ 14, 18 ಮತ್ತು 22 ಕ್ಯಾರೆಟ್ ಗ್ರೇಡ್ ಆಭರಣಗಳು ಮತ್ತು ಕರಕುಶಲ ವಸ್ತುಗಳಿಗೆ ಹಾಲ್ಮಾರ್ಕ್ ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದ್ದು, ಹಾಲ್ಮಾರ್ಕ್ ಹೊಂದಿರುವ ಆಭರಣ ಮಾತ್ರ ಮಾರಾಟ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಲಾಗಿದೆ.
ಜೂನ್ 1 ರಿಂದ ಚಿನ್ನಾಭರಣ ವರ್ತಕರು ಹಾಲ್ಮಾರ್ಕ್ ಹೊಂದಿದ ಆಭರಣ ಮಾಡುವುದು ಕಡ್ಡಾಯವಾಗಿದ್ದು, ಬಿಐಎಸ್ ನಲ್ಲಿ ನೋಂದಾಯಿಸಿಕೊಂಡು ನೋಂದಣಿ ಸಂಖ್ಯೆ ಪಡೆಯಬೇಕಿದೆ. ಇದರಿಂದ ಗ್ರಾಹಕರು ಮತ್ತು ವರ್ತಕರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.