alex Certify BIG NEWS: ಕುಸಿತವಾಯ್ತು ಚಿನ್ನದ ಬೇಡಿಕೆ, ಪಾತಾಳ ಮುಟ್ಟಿದ ಆಮದು ಪ್ರಮಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕುಸಿತವಾಯ್ತು ಚಿನ್ನದ ಬೇಡಿಕೆ, ಪಾತಾಳ ಮುಟ್ಟಿದ ಆಮದು ಪ್ರಮಾಣ

ನವದೆಹಲಿ: ಲಾಕ್ ಡೌನ್ ಜಾರಿಯಾಗಿದ್ದರಿಂದ ಚಿನ್ನದ ಆಮದು ಪ್ರಮಾಣ ಪಾತಾಳಕ್ಕೆ ಕುಸಿದಿದೆ. ಚಿನ್ನ ಆಮದು ಕಳೆದ 30 ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದು ಏಪ್ರಿಲ್ ತಿಂಗಳಲ್ಲಿ ಕೇವಲ 50 ಕೆಜಿ ಮಾತ್ರ ಖರೀದಿ ಮಾಡಲಾಗಿದೆ.

ಚಿನ್ನದ ಆಮದು ಶೇಕಡ 99.9ರಷ್ಟು ಕಡಿಮೆಯಾಗಿ ಮೂರು ದಶಕಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ. ಭಾರತ ವಿಶ್ವದಲ್ಲಿಯೇ ಎರಡನೇ ಅತಿದೊಡ್ಡ ಚಿನ್ನದ ಆಮದು ಮಾಡಿಕೊಳ್ಳುವ ದೇಶವಾಗಿದೆ. ಆದರೆ ಬೇಡಿಕೆ ಇಲ್ಲದ ಕಾರಣ ಆಮದು ಪಾತಾಳಕ್ಕೆ ಕುಸಿದಿದೆ. ಕಳೆದ ವರ್ಷ 110.18 ಟನ್ ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು. ಈ ವರ್ಷ ಏಪ್ರಿಲ್ ನಲ್ಲಿ ಕೇವಲ 50 ಕೆಜಿ ಚಿನ್ನ ಖರೀದಿಸಲಾಗಿದೆ. ಲಾಕ್ ಡೌನ್ ಜಾರಿಯಾಗಿದ್ದರಿಂದ ವಹಿವಾಟು ಬಂದ್ ಆಗಿತ್ತು. ಅಕ್ಷಯ ತೃತೀಯ ಸಂದರ್ಭದಲ್ಲಿ ಆನ್ಲೈನ್ ಖರೀದಿ ನಡೆಸಲಾಗಿದೆ. ಮೇ 4 ರಿಂದ ಬಹುತೇಕ ಕಡೆದ ಚಿನ್ನಾಭರಣ ಮಳಿಗೆ ಓಪನ್ ಆಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...