alex Certify ಒಂದೇ ದಿನ ಭಾರಿ ಹೆಚ್ಚಳದೊಂದಿಗೆ ಬೆಚ್ಚಿಬೀಳಿಸಿದ ಬೆಳ್ಳಿ, ಗೋಲ್ಡ್ ರೇಟ್ ಕೂಡ ಗಗನಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ದಿನ ಭಾರಿ ಹೆಚ್ಚಳದೊಂದಿಗೆ ಬೆಚ್ಚಿಬೀಳಿಸಿದ ಬೆಳ್ಳಿ, ಗೋಲ್ಡ್ ರೇಟ್ ಕೂಡ ಗಗನಕ್ಕೆ

 ನವದೆಹಲಿ: ಏಕಾಏಕಿ 2246 ರೂಪಾಯಿ ಹೆಚ್ಚಳವಾಗುವ ಮೂಲಕ ಬೆಳ್ಳಿ ದರ ಗ್ರಾಹಕರಿಗೆ ಶಾಕ್ ನೀಡಿದೆ. ಬೆಲೆ ಚಿನ್ನದ ಬೆಲೆ ಕೂಡ ಏರಿಕೆಯಾಗಿದೆ.

ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 418 ರೂಪಾಯಿ ಏರಿಕೆಯಾಗಿ 52,963 ರೂ. ತಲುಪಿದೆ. ಹಿಂದಿನ ದಿನದ ವಹಿವಾಟಿನಲ್ಲಿ 10 ಗ್ರಾಂಗೆ 52,445 ರೂ.ಗೆ ಮಾರಾಟವಾಗಿತ್ತು. ಇವತ್ತು 418 ರೂಪಾಯಿ ಹೆಚ್ಚಳವಾಗಿದೆ.

ಅದೇ ರೀತಿ ಪ್ರತಿ ಕೆಜಿಗೆ 70,547 ರೂಪಾಯಿ ಇದ್ದ ಬೆಳ್ಳಿ ದರ 2246 ರೂಪಾಯಿ ಏರಿಕೆಯಾಗಿದ್ದು 72,793 ರೂಪಾಯಿಗೆ ತಲುಪಿದೆ. ಹಿಂದಿನ ದಿನಕ್ಕಿಂತ ಏಕಾಏಕಿ 2246 ರೂಪಾಯಿ ಜಾಸ್ತಿಯಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...