
ನವದೆಹಲಿ: ಏಕಾಏಕಿ 2246 ರೂಪಾಯಿ ಹೆಚ್ಚಳವಾಗುವ ಮೂಲಕ ಬೆಳ್ಳಿ ದರ ಗ್ರಾಹಕರಿಗೆ ಶಾಕ್ ನೀಡಿದೆ. ಬೆಲೆ ಚಿನ್ನದ ಬೆಲೆ ಕೂಡ ಏರಿಕೆಯಾಗಿದೆ.
ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 418 ರೂಪಾಯಿ ಏರಿಕೆಯಾಗಿ 52,963 ರೂ. ತಲುಪಿದೆ. ಹಿಂದಿನ ದಿನದ ವಹಿವಾಟಿನಲ್ಲಿ 10 ಗ್ರಾಂಗೆ 52,445 ರೂ.ಗೆ ಮಾರಾಟವಾಗಿತ್ತು. ಇವತ್ತು 418 ರೂಪಾಯಿ ಹೆಚ್ಚಳವಾಗಿದೆ.
ಅದೇ ರೀತಿ ಪ್ರತಿ ಕೆಜಿಗೆ 70,547 ರೂಪಾಯಿ ಇದ್ದ ಬೆಳ್ಳಿ ದರ 2246 ರೂಪಾಯಿ ಏರಿಕೆಯಾಗಿದ್ದು 72,793 ರೂಪಾಯಿಗೆ ತಲುಪಿದೆ. ಹಿಂದಿನ ದಿನಕ್ಕಿಂತ ಏಕಾಏಕಿ 2246 ರೂಪಾಯಿ ಜಾಸ್ತಿಯಾಗಿದೆ ಎಂದು ಹೇಳಲಾಗಿದೆ.