
ನವದೆಹಲಿ: ಕೇಂದ್ರ ಸರ್ಕಾರದ ಗೋಲ್ಡ್ ಬಾಂಡ್ ಯೋಜನೆ 8 ನೇ ಹಂತದ ನೋಂದಣಿ ನವೆಂಬರ್ 9 ರಿಂದ ಆರಂಭವಾಗಲಿದೆ.
ನವೆಂಬರ್ 13 ರವರೆಗೆ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದ್ದು ಆನ್ಲೈನ್ನಲ್ಲಿ ಗೋಲ್ಡ್ ಬಾಂಡ್ ಯೋಜನೆಗೆ ನೊಂದಾಯಿಸುವ ಗ್ರಾಹಕರಿಗೆ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ನೀಡಲಾಗುತ್ತದೆ. ಆಫ್ಲೈನ್ ಗ್ರಾಹಕರಿಗೆ ಒಂದು ಗ್ರಾಮ್ ಗೆ 5,177 ರೂಪಾಯಿ ನಿಗದಿಪಡಿಸಲಾಗಿದೆ.
ಧನ್ ತೇರಾಸ್, ದೀಪಾವಳಿ ಹಬ್ಬ ಸಮೀಪದಲ್ಲಿರುವುದರಿಂದ ಚಿನ್ನದ ಮೇಲೆ ಹೂಡಿಕೆ ಮಾಡಲು ಗೋಲ್ಡ್ ಬಾಂಡ್ ಸೂಕ್ತವಾಗಿದೆ ಎಂದು ಎನ್ನುವುದು ಹೂಡಿಕೆ ತಜ್ಞರ ಅಭಿಪ್ರಾಯವಾಗಿದೆ. ನವೆಂಬರ್ 9 ರಿಂದ 13 ರವರೆಗೆ 8 ನೇ ಹಂತದ ಗೋಲ್ಡ್ ಬಾಂಡ್ ಯೋಜನೆ ನೋಂದಣಿ ನಡೆಯಲಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.