alex Certify ಗೋಲ್ಡ್ ಬಾಂಡ್ ನಲ್ಲಿ ಹೂಡಿಕೆ ಮಾಡಿದ್ರೆ ಹಲವು ಸೌಲಭ್ಯ: ಅ. 25 ರಿಂದ ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಲ್ಡ್ ಬಾಂಡ್ ನಲ್ಲಿ ಹೂಡಿಕೆ ಮಾಡಿದ್ರೆ ಹಲವು ಸೌಲಭ್ಯ: ಅ. 25 ರಿಂದ ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆ ಆರಂಭ

ಮೈಸೂರು: ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯು 2021-22ನೇ ಸಾಲಿನ ಅಕ್ಡೋಬರ್ 25 ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 29 ರವರಗೆ ಇರುತ್ತದೆ. ಗ್ರಾಹಕರು ತಮ್ಮ ಸಮೀಪದ ಅಂಚೆ ಕಚೇರಿಯ ಮೂಲಕ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಹೂಡಿಕೆ ಮಾಡಿಕೊಳ್ಳಬಹುದು.

ಸಾವರಿನ್ ಗೋಲ್ಡ್ ಬಾಂಡ್ ವೈಶಿಷ್ಟ್ಯಗಳು:

ಕನಿಷ್ಟ ಹೂಡಿಕೆ ಒಂದು ಗ್ರಾಂ ಆಗಿದ್ದು, ವ್ಯಕ್ತಿಗಳಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಗಳಿಗೆ 4 ಕೆ.ಜಿ ಹಾಗೂ ಟ್ರಸ್ಟ್ ಮತ್ತು ಇದೇ ರೀತಿಯ ಘಟಕಗಳಿಗೆ 20 ಕೆಜಿ(ಒಂದು ಆರ್ಥಿಕ ವರ್ಷದಲ್ಲಿ) ಗರಿಷ್ಟ ಹೂಡಿಕೆಯಾಗಿರುತ್ತದೆ. ಬಾಂಡ್ ಅವಧಿ 8 ವರ್ಷ. ಬಾಂಡ್ ಅವಧಿ ಮುಗಿದಾಗ ಮಾರುಕಟ್ಟೆಯಲ್ಲಿರುವ ಚಿನ್ನದ ದರ ಮೊತ್ತವನ್ನು ನೀಡಲಾಗುವುದು. ವಾರ್ಷಿಕ ಶೇ.2.5 ರಷ್ಟು ನಿಶ್ಚಿತ ಬಡ್ಡಿಯೂ ಲಭ್ಯ.(ಅರ್ಧವಾರ್ಷಿಕ-ವರ್ಷಕ್ಕೆ ಎರಡು ಬಾರಿ)5, 6, ಮತ್ತು 7ನೇ ವರ್ಷಗಳಲ್ಲಿಯೂ ಸಹ ನಿರ್ಗಮಿಸುವ ಅವಕಾಶವಿದೆ. ಹಾಗೂ ಸಾಲಗಳಿಗೆ ಮೇಲಾಧಾರವಾಗಿ ಉಪಯೋಗಿಸಬಹದು.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ಅಂಚೆ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ: 0821-2417308, 2417307, 9845107947ಅನ್ನು ಸಂಪರ್ಕಿಸಬಹುದು ಎಂದು ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...