ಗೂಗಲ್ ತನ್ನ ಜಿಮೇಲ್ ಲೋಗೋದಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಸಾಂಪ್ರದಾಯಿಕ ಲೋಗೋ ತೆಗೆದು ಹಾಕಿರುವ ಗೂಗಲ್ ಹೊಸ ಲೋಗೋ ಬಳಕೆದಾರರ ಮುಂದಿಡಲಿದೆ. ಬಳಕೆದಾರರಿಗೆ ಗೂಗಲ್ ಜಿಮೇಲ್ ನಲ್ಲಿ ಬರಿ ಎಂ ಅಕ್ಷರ ಕಾಣಲಿದೆ.
ಎಂ ಅಕ್ಷರವು ಟ್ರೇಡ್ಮಾರ್ಕ್ ಬಣ್ಣವಾದ ಕೆಂಪು, ನೀಲಿ, ಹಸಿರು ಮತ್ತು ಹಳದಿ ಬಣ್ಣದಲ್ಲಿರಲಿದೆ. ಶೀಘ್ರದಲ್ಲಿಯೇ ಹೊಸ ಲೋಗೋದೊಂದಿಗೆ ಜಿಮೇಲ್ ಗ್ರಾಹಕರಿಗೆ ಲಭ್ಯವಾಗಲಿದೆ. ಜಿಮೇಲ್ ಹೊಸ ಲೋಗೋ ಆಕರ್ಷಕವಾಗಿದೆ.
ಗೂಗಲ್ ಕೆಲ ದಿನಗಳ ಹಿಂದೆ ವೀಡಿಯೊ ಕಾನ್ಫರೆನ್ಸಿಂಗ್ ಸರ್ವಿಸ್ ಮೀಟ್ಗೆ ಎರಡು ಹೊಸ ವೈಶಿಷ್ಟ್ಯಗಳನ್ನು ಸೇರಿಸುವುದಾಗಿ ಘೋಷಿಸಿತ್ತು. ಅದು ಅಕ್ಟೋಬರ್ 8 ರಿಂದ ಬಳಕೆದಾರರಿಗೆ ಲಭ್ಯವಾಗಲಿದೆ. ಇತ್ತೀಚಿನ ದಿನಗಳಲ್ಲಿ, ಗೂಗಲ್ ಕ್ಯಾಲೆಂಡರ್ಗಳು, ಡಾಕ್ಸ್, ಮೀಟ್ ಲೋಗೋಗಳನ್ನು ಸಹ ನವೀಕರಿಸಿದೆ.
ಗೂಗಲ್ ಜಿಮೇಲ್ ಲೋಗೋ ಬದಲಾವಣೆ ವೇಳೆ ಜಿಮೇಲ್ ತಂಡದ ಜೊತೆ ಚರ್ಚಿಸಿದೆ. ಬದಲಾವಣೆ ಅಷ್ಟು ಸುಲಭವಾಗಿರಲಿಲ್ಲವೆಂದು ಹೇಳಿದೆ. ಬದಲಾವಣೆ ಕೆಲಸ ಶುರುವಾದಾಗ ನಕಾರಾತ್ಮಕ ವರದಿ ಬಂದಿತ್ತು. ಸಾಕಷ್ಟು ಚರ್ಚೆ, ಕೆಲಸದ ನಂತ್ರ ಹೊಸ ಲೋಗೋ ಸಿದ್ಧವಾಗಿದೆ ಎಂದು ಗೂಗಲ್ ಹೇಳಿದೆ.