ಬೆಂಗಳೂರು: ಹಾಲಿನ ದರ 3 ರೂಪಾಯಿ ಏರಿಕೆ ಮಾಡಲು ಕೆಎಂಎಫ್ ನಿರ್ಧಾರ ಕೈಗೊಂಡಿದೆ. ಕೆಎಂಎಫ್ ಅಧ್ಯಕ್ಷರ ಸಭೆಯಲ್ಲಿ ಹಾಲಿನ ದರ ಏರಿಕೆಗೆ ನಿರ್ಧರಿಸಲಾಗಿದ್ದು, ಸರ್ಕಾರ ಅನುಮತಿ ನೀಡಿದಲ್ಲಿ 3 ರೂಪಾಯಿ ಹೆಚ್ಚಳ ಮಾಡಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಳೆದ 8 ತಿಂಗಳಿನಿಂದ ಜಿಲ್ಲಾ ಹಾಲು ಒಕ್ಕೂಟಗಳು ಕೆಎಂಎಫ್ ಮೇಲೆ ಒತ್ತಡ ಹಾಕುತ್ತಿವೆ. ದರ ಏರಿಕೆಯ ಬಗ್ಗೆ ಕೆಎಂಎಫ್ ನಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಈ ಬಗ್ಗೆ ಸರ್ಕಾರದಿಂದ ಯಾವುದೇ ನಿರ್ಧಾರ ಮಾಡಿರಲಿಲ್ಲ. ಇದೀಗ ಬೆಲೆ ಏರಿಸಲು ಕೆಎಂಎಫ್ ಅಧ್ಯಕ್ಷರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಕೆಎಂಎಫ್ ನಿಂದ ತುಪ್ಪದ ಬೆಲೆ ಏರಿಕೆ ಮಾಡಲಾಗಿತ್ತು.