alex Certify ಈ ಕಾರುಗಳ ಮೇಲೆ ಸಿಗ್ತಿದೆ 40 ಸಾವಿರದವರೆಗೆ ರಿಯಾಯಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರುಗಳ ಮೇಲೆ ಸಿಗ್ತಿದೆ 40 ಸಾವಿರದವರೆಗೆ ರಿಯಾಯಿತಿ

ಡಾಟ್ಸನ್ ಕಾರು ಖರೀದಿದಾರರಿಗೊಂದು ಖುಷಿ ಸುದ್ದಿಯಿದೆ. ಈ ತಿಂಗಳು ಕಂಪನಿ ದಟ್ಸನ್ ಕಾರುಗಳಿಗೆ ಉತ್ತಮ ರಿಯಾಯಿತಿ  ನೀಡುತ್ತಿದೆ. ಈ ತಿಂಗಳು  40,000 ರೂಪಾಯಿಗಳ ಲಾಭದೊಂದಿಗೆ ಡಾಟ್ಸನ್ ಗೋ, ರೆಡಿಗೊ, ಗೋ ಪ್ಲಸ್ ಕಾರುಗಳನ್ನು ಖರೀದಿಸಬಹುದು. ಜನವರಿ 31ರವರೆಗೆ ಗ್ರಾಹಕರು ಇದ್ರ ಲಾಭ ಪಡೆಯಬಹುದು.

ಡಾಟ್ಸನ್ ಗೋ ಮತ್ತು ಗೋ ಪ್ಲಸ್ ಮಾಡೆಲ್ ಮೇಲೆ 40 ಸಾವಿರದವರೆಗೆ ಲಾಭ ಸಿಗಲಿದೆ. 20 ಸಾವಿರ ರೂಪಾಯಿಗಳ ನಗದು ರಿಯಾಯಿತಿ ಜೊತೆಗೆ 20 ಸಾವಿರ ರೂಪಾಯಿಗಳ ವಿನಿಮಯ ಬೋನಸ್ ಸಿಗಲಿದೆ. ಡಾಟ್ಸನ್ ಗೋ ಎಕ್ಸ್ ಶೋ ರೂಂ ಬೆಲೆ 4,02,778 ರೂಪಾಯಿಗಳಿಂದ ಪ್ರಾರಂಭವಾಗಲಿ. ಗೋ ಪ್ಲಸ್ ಆರಂಭಿಕ ಬೆಲೆ 4,25,926 ರೂಪಾಯಿ.

ರೆಡಿ ಗೋ ಮಾಡೆಲ್ ಬಗ್ಗೆ ಹೇಳೋದಾದ್ರೆ ಗ್ರಾಹಕರು ಇದರ ಮೇಲೆ 35000 ರೂಪಾಯಿಗಳವರೆಗೆ ಲಾಭ ಪಡೆಯಬಹುದು. ಜನವರಿ ತಿಂಗಳಲ್ಲಿ ಕಂಪನಿಯು ಕಾರಿನ ಮೇಲೆ 15 ಸಾವಿರ ರೂಪಾಯಿಗಳವರೆಗೆ ನಗದು ರಿಯಾಯಿತಿ ನೀಡುತ್ತಿದೆ. ಇದಲ್ಲದೆ 15 ಸಾವಿರ ರೂಪಾಯಿಗಳ ವಿನಿಮಯ ಬೋನಸ್ ನೀಡ್ತಿದೆ. ರೆಡಿ ಗೋ ಎಕ್ಸ್ ಶೋ ರೂಂ ಬೆಲೆ ಸುಮಾರು 2,86,186 ರೂಪಾಯಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...