50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸರ್ಕಾರ ಖುಷಿ ಸುದ್ದಿ ನೀಡುವ ಸಾಧ್ಯತೆ ದಟ್ಟವಾಗಿದೆ. ಸರ್ಕಾರ, ಹೋಳಿಗೂ ಮುನ್ನ ಡಿಎಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಸರ್ಕಾರಿ ನೌಕರರ ಡಿಎ ಶೇಕಡಾ 4ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದಲ್ಲದೆ ಕೊರೊನಾ ಹಿನ್ನಲೆಯಲ್ಲಿ ನಿಲ್ಲಿಸಲಾಗಿದ್ದ ಪ್ರಿಯ ಭತ್ಯೆಯನ್ನು ಮತ್ತೆ ಸರ್ಕಾರ ನೀಡುವ ಸಾಧ್ಯತೆ ಹೆಚ್ಚಿದೆ. ಆದ್ರೆ ಈ ಬಗ್ಗೆ ಸರ್ಕಾರ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
21 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳಿಗೆ ಭರ್ಜರಿ ʼಬಂಪರ್ʼ ಸುದ್ದಿ
ಜನವರಿ-ಜೂನ್ ನಲ್ಲಿ ಡಿಎಯನ್ನು ಶೇಕಡಾ 4ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಕೇಂದ್ರ ಸರ್ಕಾರ,ನೌಕರರ ಡಿಎಯನ್ನು ವರ್ಷಕ್ಕೆ ಎರಡು ಭಾರಿ ಪರಿಷ್ಕರಿಸುತ್ತದೆ. ಮೊದಲ ಬದಲಾವಣೆ ಜನವರಿಯಿಂದ ಜೂನ್ ವರೆಗೆ ಆದ್ರೆ ಎರಡನೇ ಬದಲಾವಣೆ ಜುಲೈನಿಂದ ಡಿಸೆಂಬರ್ ವರೆಗೆ ಜಾರಿಯಲ್ಲಿರುತ್ತದೆ.
ಒಂದು ವೇಳೆ ಸರ್ಕಾರ ನಿಲ್ಲಿಸಿದ್ದ ಪ್ರಿಯ ಭತ್ಯೆಯನ್ನು ಮತ್ತೆ ನೀಡಲು ಶುರು ಮಾಡಿದ್ರೆ ಹಾಗೂ ಜನವರಿ-ಜುಲೈ ಅವಧಿಯಲ್ಲಿ ಶೇಕಡಾ 4ರಷ್ಟು ಡಿಎ ಹೆಚ್ಚಳ ಮಾಡಿದ್ರೆ ಸರ್ಕಾರಿ ನೌಕರರಿಗೆ ಶೇಕಡಾ 8ರಷ್ಟು ಡಿಎ ಲಾಭ ಸಿಗಲಿದೆ. ಈಗ ಶೇಕಡಾ 17ರಷ್ಟು ಡಿಎ ಸಿಗ್ತಿದೆ. ಹೆಚ್ಚಳದ ನಂತ್ರ ಶೇಕಡಾ 25ರಷ್ಟು ಡಿಎ ಸಿಗಲಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಸಿಗುವ ಪ್ರಯಾಣ ಭತ್ಯೆ ಕೂಡ ಡಿಎ ಜೊತೆಗೆ ಹೆಚ್ಚಾಗಲಿದೆ ಎನ್ನಲಾಗ್ತಿದೆ. ಏಪ್ರಿಲ್ ನಲ್ಲಿ ಮೂರು ಬದಲಾವಣೆಯಾಗುವ ಸಾಧ್ಯತೆಯಿದೆ. ನೌಕರರ ಗ್ರ್ಯಾಚುಟಿ,ಭವಿಷ್ಯ ನಿಧಿ ಮತ್ತು ನೌಕರರ ಕೆಲಸದ ಸಮಯದಲ್ಲಿ ದೊಡ್ಡ ಬದಲಾವಣೆಯಾಗುದ ಸಾಧ್ಯತೆಯಿದೆ.