alex Certify ಈ ಕಾರಣಗಳಿಂದಾಗಿ ʼವರ್ಕ್‌ ಫ್ರಂ ಹೋಮ್‌ʼ ಬಿಟ್ಟು ಮತ್ತೆ ಕಛೇರಿಗೆ ತೆರಳಲು ಇಷ್ಟಪಡದ ಉದ್ಯೋಗಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಗಳಿಂದಾಗಿ ʼವರ್ಕ್‌ ಫ್ರಂ ಹೋಮ್‌ʼ ಬಿಟ್ಟು ಮತ್ತೆ ಕಛೇರಿಗೆ ತೆರಳಲು ಇಷ್ಟಪಡದ ಉದ್ಯೋಗಿಗಳು

Full Pants' to 'Traffic', Harsh Goenka Shares Why People Don't Want to Go Back to Offices

ಕೋವಿಡ್-19 ಸಾಂಕ್ರಮಿಕ ಅಟಕಾಯಿಸಿಕೊಂಡಾಗಿನಿಂದಲೂ ಜಗತ್ತಿನಾದ್ಯಂತ ಬಹುತೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ತಂತಮ್ಮ ಮನೆಗಳಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿವೆ. ತಮ್ಮ ಉದ್ಯೋಗಿಗಳ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಕಂಪನಿಗಳು ಈ ಕ್ರಮಕ್ಕೆ ಮುಂದಾಗಿವೆ.

ಮನೆಗಳಿಂದಲೇ ಕೆಲಸ ಮಾಡುವುದು ಈಗ ಸರ್ವೇಸಾಮಾನ್ಯವಾಗಿದ್ದು, ಬಹಳಷ್ಟು ಜನರು ತಂತಮ್ಮ ಮನೆಗಳಲ್ಲೇ ಟ್ರಾಫಿಕ್ ಕಿರಿಕಿರಿಯಂಥ ಕಾಟಗಳಿಲ್ಲದೇ ಆರಾಮವಾಗಿ ತಮ್ಮದೇ ಜಾಗಗಳಿಂದ ಕೆಲಸ ಮಾಡುತ್ತಿದ್ದಾರೆ.

ಕಚೇರಿಗಳು ಮತ್ತೆ ಎಂದಿನಂತೆ ಕೆಲಸ ಮಾಡಲು ಆರಂಭಿಸಿದ ವೇಳೆ ಜನರು ಯಾವೆಲ್ಲಾ ಕಾರಣಗಳಿಗೆ ಮರಳಿ ಕಚೇರಿಗಳಿಗೆ ಹೋಗಲು ಇಷ್ಟ ಪಡುವುದಿಲ್ಲ ಎಂದು ಉದ್ಯಮಿ ಹರ್ಷ ಗೋಯೆಂಕಾ ಚಿತ್ರವೊಂದನ್ನು ಟ್ವೀಟ್ ಮಾಡಿದ್ದಾರೆ. ’ಟ್ರಾಫಿಕ್‌ನಲ್ಲಿ ಸಮಯ ವ್ಯರ್ಥ ಮಾಡಲು ಇಷ್ಟವಿಲ್ಲ…..’ ’ನಮ್ಮ ಕುಟುಂಬಗಳ ಜೊತೆಗಿದ್ದುಕೊಂಡೇ ಕೆಲಸ ಮಾಡಲು ಇಚ್ಛಿಸುತ್ತೇವೆ…..’ ’ನಾನು ಮನೆಯಿಂದ ಕೆಲಸ ಮಾಡುವಾಗಲೇ ಹೆಚ್ಚು ಕ್ರಿಯಾತ್ಮಕವಾಗಿರುತ್ತೇನೆ…..’ ಎಂಬಂಥ ಕಾರಣಗಳೊಂದಿಗೆ ’ಪೂರ್ಣ ಪ್ಯಾಂಟ್‌ಗಳನ್ನು ಧರಿಸಲು ಆಗದು’ ಎಂಬಂಥ ಫನ್ನಿ ಕಾರಣಗಳನ್ನೂ ಜನ ಕೊಟ್ಟಿದ್ದಾರೆ ಎಂದು ಈ ಪೈ ನಕ್ಷೆಯಲ್ಲಿ ನಾವು ನೋಡಬಹುದಾಗಿದೆ.

ಮಕ್ಕಳಿಗೆ ಲಸಿಕೆ ಬಗ್ಗೆ ಗುಡ್ ನ್ಯೂಸ್: ಸುರಕ್ಷಿತ, ಪರಿಣಾಮಕಾರಿಯಾಗಿದೆ ಈ ಲಸಿಕೆ –ತಜ್ಞರ ಶಿಫಾರಸು

ನೆಟ್ಟಿಗರೊಬ್ಬರಿಗೆ ತಮ್ಮ ಪಾದರಕ್ಷೆಗಳು ಹಾಗೂ ಫಾರ್ಮಲ್ ಬಟ್ಟೆಗಳು ಎಲ್ಲಿವೆ ಎಂಬುದೇ ಅರಿಯದಂತೆ ಆಗಿದ್ದರೆ, ವರ್ಷವೆಲ್ಲಾ ಮನೆಯಲ್ಲೇ ಇರುವ ಕಾರಣದಿಂದ ತಮ್ಮ ಬಟ್ಟೆಗಳೆಲ್ಲಾ ಟೈಟ್ ಆಗಿವೆ ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...