alex Certify ಅಪ್ಪಿತಪ್ಪಿಯೂ ಈ ಪಾಸ್ವರ್ಡ್ ಬಳಕೆ ಮಾಡೀರಿ ಜೋಕೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪಿತಪ್ಪಿಯೂ ಈ ಪಾಸ್ವರ್ಡ್ ಬಳಕೆ ಮಾಡೀರಿ ಜೋಕೆ….!

ನೆನಪಿನಲ್ಲಿಡಲು ಸುಲಭವಾದ ಪಾಸ್​ವರ್ಡ್​ಗಳನ್ನ ಇಟ್ಟುಕೊಳ್ಳೋದು ಪ್ರತಿಯೊಬ್ಬರೂ  ಮಾಡುವ ಕೆಲಸ. ಆದರೆ ನಾವಿಡುವ ಸುಲಭ ಪಾಸ್​ವರ್ಡ್​ಗಳು ಹ್ಯಾಕರ್​ಗಳಿಗೆ ವರದಾನವಾಗುವಂತಿರಬಾರದು. 123456 ಹಾಗೂ ‘iloveyou’ ಎಂಬ ಪಾಸ್​​ವರ್ಡ್​ಗಳನ್ನ ಭೇದಿಸುವುದು ಬಹಳ ಸುಲಭದ ಕೆಲಸವಂತೆ.

ಪಾಸ್​ವರ್ಡ್​ ನಿರ್ವಹಣಾ ಕಂಪನಿಯಾದ ನಾರ್ಡ್​ ಪಾಸ್​​ 200 ಕೆಟ್ಟ ಪಾಸ್​ವರ್ಡ್​ಗಳ ಪಟ್ಟಿಯನ್ನ ಪ್ರಕಟಿಸಿದೆ.  ಆ ಪಾಸ್​ವರ್ಡ್​ಗಳನ್ನ ಬಳಸುವ ಬಳಕೆದಾರರ ಸಂಖ್ಯೆ ಹಾಗೂ ಅದನ್ನ ಹ್ಯಾಕ್​ ಮಾಡೋಕೆ ಎಷ್ಟು ಸಮಯ ಬೇಕಾಗಬಹುದು ಅನ್ನೋದನ್ನೂ ಪಟ್ಟಿಯಲ್ಲಿ ಬಹಿರಂಗಪಡಿಸಲಾಗಿದೆ

2020 ರ ದುರ್ಬಲ ಪಾಸ್​ವರ್ಡ್​ಗಳ ಪಟ್ಟಿಯಲ್ಲಿ 123456 ಅಗ್ರಸ್ಥಾನದಲ್ಲಿದೆ. ಇದನ್ನ ಒಂದು ಸೆಕೆಂಡ್​ಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಹ್ಯಾಕ್​ ಮಾಡಬಹುದಂತೆ. 25.4 ಲಕ್ಷಕ್ಕೂ ಹೆಚ್ಚು ಬಳಕೆದಾರರು ಈ ಪಾಸ್​ವರ್ಡ್​ನ್ನ ಬಳಕೆ ಮಾಡುತ್ತಿದ್ದಾರೆ,

123456789 ಇದು ದುರ್ಬಲ ಪಾಸ್​ವರ್ಡ್​ಗಳ ಪೈಕಿ ಮೊದಲ ರನ್ನರ್​ ಅಪ್​ ಸ್ಥಾನ ಪಡೆದಿದೆ. ಇದನ್ನ ಸೆಕೆಂಡ್​ಗಿಂತ ಕಡಿಮೆ ಅವಧಿಯಲ್ಲಿ ಭೇದಿಸಬಹುದಾಗಿದೆ. ಎರಡನೇ ರನ್ನರ್ ಅಪ್​ ‘ಪಿಕ್ಚರ್​ 1’  – ಇದನ್ನ ಮೂರು ಸೆಕೆಂಡ್ ಗಳಲ್ಲಿ ಬ್ರೇಕ್​ ಮಾಡಬಹುದಾಗಿದೆ.

ನಾಲ್ಕನೇ ಕೆಟ್ಟ ಪಾಸ್​ವರ್ಡ್ ’ಪಾಸ್​​ವರ್ಡ್’ ಎಂಬ ಶಬ್ದವೇ ಆಗಿದೆ. ಐದನೇ ಸ್ಥಾನದಲ್ಲಿ 12345678 , ನಂತರದ ಸ್ಥಾನದಲ್ಲಿ 111111, 123123, 12345,1234567890 ಇದ್ದು ಇವನ್ನೆಲ್ಲ 1 ಸೆಕೆಂಡ್​ ಒಳಗಾಗಿ ಕಂಡುಹಿಡಿಯಬಹುದಾಗಿದೆ.

ಈ ಪಟ್ಟಿಯಲ್ಲಿ ಹತ್ತನೇ ಸ್ಥಾನವನ್ನ ಸೆನ್ಹಾ ಎಂಬ ಶಬ್ದ ಹೊಂದಿದ್ದು 10 ಸೆಕೆಂಡ್​ಗಳಲ್ಲಿ ಪಾಸ್​ವರ್ಡ್​ ಬ್ರೇಕ್​ ಮಾಡಬಹುದಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...