ನೆನಪಿನಲ್ಲಿಡಲು ಸುಲಭವಾದ ಪಾಸ್ವರ್ಡ್ಗಳನ್ನ ಇಟ್ಟುಕೊಳ್ಳೋದು ಪ್ರತಿಯೊಬ್ಬರೂ ಮಾಡುವ ಕೆಲಸ. ಆದರೆ ನಾವಿಡುವ ಸುಲಭ ಪಾಸ್ವರ್ಡ್ಗಳು ಹ್ಯಾಕರ್ಗಳಿಗೆ ವರದಾನವಾಗುವಂತಿರಬಾರದು. 123456 ಹಾಗೂ ‘iloveyou’ ಎಂಬ ಪಾಸ್ವರ್ಡ್ಗಳನ್ನ ಭೇದಿಸುವುದು ಬಹಳ ಸುಲಭದ ಕೆಲಸವಂತೆ.
ಪಾಸ್ವರ್ಡ್ ನಿರ್ವಹಣಾ ಕಂಪನಿಯಾದ ನಾರ್ಡ್ ಪಾಸ್ 200 ಕೆಟ್ಟ ಪಾಸ್ವರ್ಡ್ಗಳ ಪಟ್ಟಿಯನ್ನ ಪ್ರಕಟಿಸಿದೆ. ಆ ಪಾಸ್ವರ್ಡ್ಗಳನ್ನ ಬಳಸುವ ಬಳಕೆದಾರರ ಸಂಖ್ಯೆ ಹಾಗೂ ಅದನ್ನ ಹ್ಯಾಕ್ ಮಾಡೋಕೆ ಎಷ್ಟು ಸಮಯ ಬೇಕಾಗಬಹುದು ಅನ್ನೋದನ್ನೂ ಪಟ್ಟಿಯಲ್ಲಿ ಬಹಿರಂಗಪಡಿಸಲಾಗಿದೆ
2020 ರ ದುರ್ಬಲ ಪಾಸ್ವರ್ಡ್ಗಳ ಪಟ್ಟಿಯಲ್ಲಿ 123456 ಅಗ್ರಸ್ಥಾನದಲ್ಲಿದೆ. ಇದನ್ನ ಒಂದು ಸೆಕೆಂಡ್ಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಹ್ಯಾಕ್ ಮಾಡಬಹುದಂತೆ. 25.4 ಲಕ್ಷಕ್ಕೂ ಹೆಚ್ಚು ಬಳಕೆದಾರರು ಈ ಪಾಸ್ವರ್ಡ್ನ್ನ ಬಳಕೆ ಮಾಡುತ್ತಿದ್ದಾರೆ,
123456789 ಇದು ದುರ್ಬಲ ಪಾಸ್ವರ್ಡ್ಗಳ ಪೈಕಿ ಮೊದಲ ರನ್ನರ್ ಅಪ್ ಸ್ಥಾನ ಪಡೆದಿದೆ. ಇದನ್ನ ಸೆಕೆಂಡ್ಗಿಂತ ಕಡಿಮೆ ಅವಧಿಯಲ್ಲಿ ಭೇದಿಸಬಹುದಾಗಿದೆ. ಎರಡನೇ ರನ್ನರ್ ಅಪ್ ‘ಪಿಕ್ಚರ್ 1’ – ಇದನ್ನ ಮೂರು ಸೆಕೆಂಡ್ ಗಳಲ್ಲಿ ಬ್ರೇಕ್ ಮಾಡಬಹುದಾಗಿದೆ.
ನಾಲ್ಕನೇ ಕೆಟ್ಟ ಪಾಸ್ವರ್ಡ್ ’ಪಾಸ್ವರ್ಡ್’ ಎಂಬ ಶಬ್ದವೇ ಆಗಿದೆ. ಐದನೇ ಸ್ಥಾನದಲ್ಲಿ 12345678 , ನಂತರದ ಸ್ಥಾನದಲ್ಲಿ 111111, 123123, 12345,1234567890 ಇದ್ದು ಇವನ್ನೆಲ್ಲ 1 ಸೆಕೆಂಡ್ ಒಳಗಾಗಿ ಕಂಡುಹಿಡಿಯಬಹುದಾಗಿದೆ.
ಈ ಪಟ್ಟಿಯಲ್ಲಿ ಹತ್ತನೇ ಸ್ಥಾನವನ್ನ ಸೆನ್ಹಾ ಎಂಬ ಶಬ್ದ ಹೊಂದಿದ್ದು 10 ಸೆಕೆಂಡ್ಗಳಲ್ಲಿ ಪಾಸ್ವರ್ಡ್ ಬ್ರೇಕ್ ಮಾಡಬಹುದಾಗಿದೆ.