ನವದೆಹಲಿ: ಬೇಕರಿ ಸೇರಿದಂತೆ ಎಲ್ಲಾ ಸಿಹಿ ತಿನಿಸುಗಳ ಉತ್ಪನ್ನಗಳ ಮೇಲೆ ಬಳಕೆ ಅವಧಿ ನಮೂದಿಸುವುದು ಕಡ್ಡಾಯವಾಗಿದೆ.
ಬೆಸ್ಟ್ ಬಿಫೋರ್ ಡೇಟ್ ಅನ್ನು ಸಿಹಿ ತಿಂಡಿಗಳ ಮಾರಾಟದ ವೇಳೆ ಉತ್ಪನ್ನಗಳ ಮೇಲೆ ನಮೂದಿಸುವುದು ಕಡ್ಡಾಯವಾಗಿರುತ್ತದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣಿತ ಪ್ರಾಧಿಕಾರ ಈ ಆದೇಶ ಹೊರಡಿಸಿದೆ.
ಪ್ಯಾಕ್ ಮಾಡಿದ ತಿಂಡಿಗಳು ಮಾತ್ರವಲ್ಲದೆ, ಟ್ರೇಗಳಲ್ಲಿಟ್ಟು ಬಿಡಿಯಾಗಿ ಮಾರಾಟ ಮಾಡುವ ಸಿಹಿ ತಿಂಡಿಗಳಿಗೂ ಇದು ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.