alex Certify ಗಮನಿಸಿ: ಸಣ್ಣ ಆಹಾರ ಮಾರಾಟಗಾರರು, ಉತ್ಪಾದಕರಿಗೆ ಪ್ರಮಾಣ ಪತ್ರ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಸಣ್ಣ ಆಹಾರ ಮಾರಾಟಗಾರರು, ಉತ್ಪಾದಕರಿಗೆ ಪ್ರಮಾಣ ಪತ್ರ ಕಡ್ಡಾಯ

ಬಳ್ಳಾರಿ: ಸಣ್ಣ ಆಹಾರ ಮಾರಾಟಗಾರರು, ಉತ್ಪಾದಕರು, ಆಹಾರ ಸಂಸ್ಕರಣ ಉದ್ಯಮಿದಾರರು ಹೀಗೆ ವಿವಿಧ ಎಲ್ಲಾ ಆಹಾರ ಉದ್ಯಮದ ವ್ಯಾಪಾರಸ್ಥರಿಗೆ ಆಹಾರ ಸೇವೆಗಳ ಉದ್ದೇಶಗಳನ್ನು ಬಲಪಡಿಸಲು ಈಗಾಗಲೇ ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪ್ರತಿಯೊಬ್ಬರು ತರಬೇತಿಯನ್ನು ಪಡೆದು ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿಗಳು ತಿಳಿಸಿದ್ದಾರೆ.

FSSAI ಪ್ರಾಧಿಕಾರವು ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ಕಾರ್ಯಕ್ರಮದ ಮೂಲಕ ಆಹಾರ ಗುಣಮಟ್ಟ ಮತ್ತು ಸ್ವಚ್ಛತಾ ಕಾಳಜಿಯನ್ನು ಬೆಳೆಸಲು ಅಂತಹ ತರಬೇತುದಾರರಿಂದ ಮತ್ತು ನಿಯಂತ್ರಕ ಕಾರ್ಯಕರ್ತರನ್ನು ವಿವಿಧ ಮಟ್ಟದಲ್ಲಿ ನಿರ್ಮಿಸಲು ಪ್ರಯತ್ನಿಸಲಾಗಿದೆ. ಪ್ರಾಧಿಕಾರದ ಶಿಫಾರಸ್ಸಿನಂತೆ ಎಲ್ಲಾ ಆಹಾರ ಉದ್ಯಮದವರು, ವ್ಯಾಪಾರ ನಡೆಸುವ, ಆಹಾರ ತಯಾರಿಸುವ ಜಾಗದಲ್ಲಿ ಕನಿಷ್ಠ 25 ಜನರಿಗೆ ಒಬ್ಬರಂತೆ ತರಬೇತಿ ಪಡೆದು ಪ್ರಮಾಣ ಪತ್ರ ಹೊಂದಿರುವ ಆಹಾರ ನಿರ್ವಾಹಕರು ಮತ್ತು ಪ್ರತಿ ವ್ಯಾಪಾರ ಸ್ಥಳಗಳಲ್ಲಿ ಕನಿಷ್ಠ ಒಬ್ಬ ಆಹಾರ ನಿರ್ವಾಹಕರು ಇರಬೇಕು. ಎಲ್ಲಾ ಆಹಾರ ವ್ಯಾಪಾರಸ್ಥರು ಆಹಾರ ನಿರ್ವಾಹಕರನ್ನು ತರಬೇತಿಗಾಗಿ ಕಡ್ಡಾಯವಾಗಿ ಭಾಗವಹಿಸಬೇಕು.

ಆಹಾರ ವ್ಯವಹಾರವನ್ನು ಪ್ರಾರಂಭಿಸಲು ಇಚ್ಛಿಸುವವರು ಹಾಗೂ ಈಗಾಗಲೇ ಆಹಾರೋದ್ಯಮ ನಡೆಸುತ್ತಿರುವವರು ಪ್ರತಿಯೊಬ್ಬರು ಸಹ ತರಬೇತಿ ಮತ್ತು ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ತರಬೇತಿಯಿಂದ ಉತ್ಪಾದಕತೆಯನ್ನು ಹೆಚ್ಚಿಸಲು, ಸಹಯೋಗವನ್ನು ಹೊಂದಲು, ನಿರ್ವಹಣೆಯ ಹೆಚ್ಚಿನ ಮಾಹಿತಿಯನ್ನು ಪಡೆಯಲು, ನಿರ್ವಹಣೆಯ ವೆಚ್ಚ ಕಡಿಮೆ ಮಾಡಲು, ಹೆಚ್ಚಿನ ಜ್ಞಾನ ಹೊಂದಲು, ತಾಂತ್ರಿಕವಾಗಿ ನೈಪುಣ್ಯತೆ ಪಡೆಯಲು, ಬದಲಾಗುತ್ತಿರುವ ಆಧುನಿಕ ಜಗತ್ತಿನೊಂದಿಗೆ ತಾಂತ್ರಿಕವಾಗಿ ವ್ಯವಹರಿಸಲು, ತಿಳಿಯುವ ಅವಕಾಶವನ್ನು ಕಲ್ಪಿಸುವ ಉದ್ದೇಶವಾಗಿದೆ.

ತರಬೇತಿಗಾಗಿ ಹಾಗೂ ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಂಯೋಜಕರ ದೂ.ಸಂ.8123528854 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...