alex Certify ಗೃಹೋತ್ಪನ್ನಗಳ ಮೇಲೆ ಫ್ಲಿಪ್​ಕಾರ್ಟ್​ನಿಂದ ಭರ್ಜರಿ ಡಿಸ್ಕೌಂಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹೋತ್ಪನ್ನಗಳ ಮೇಲೆ ಫ್ಲಿಪ್​ಕಾರ್ಟ್​ನಿಂದ ಭರ್ಜರಿ ಡಿಸ್ಕೌಂಟ್​

ಕೊರೊನಾದ ಬಳಿಕ ಆನ್​ಲೈನ್​ ಶಾಪಿಂಗ್​​ ಗೆ ಬೇಡಿಕೆ ಹೆಚ್ಚಾಗಿದೆ. ಇದೇ ಅಂಶವನ್ನ ಗಮನದಲ್ಲಿಟ್ಟುಕೊಂಡು ಆನ್​ಲೈನ್​ ಶಾಪಿಂಗ್​ ಕಂಪನಿ ಫ್ಲಿಪ್​ಕಾರ್ಟ್​ ಗ್ರಾಹಕರಿಗಾಗಿ ಭರ್ಜರಿ ಆಫರ್​ ನೀಡಿದೆ. ಈ ಆಫರ್​ನ ಅಡಿಯಲ್ಲಿ ಅನೇಕ ಐಟೆಂಗಳ ಬೆಲೆ ಎಂಆರ್​ಪಿಯ ಅರ್ಧದಷ್ಟಿದೆ. ಇಂದು ಫ್ಲಿಪ್​ಕಾರ್ಟ್​ ಹೋಂ ಅಪ್ಲೈಯೆನ್ಸ್​ ಸೇಲ್​ನ ಕೊನೆಯ ದಿನವಾಗಿದೆ.

iFFALCON ಸ್ಮಾರ್ಟ್​ ಟಿವಿಗೆ ಫ್ಲಿಪ್​ಕಾರ್ಟ್ ಬಂಪರ್​ ರಿಯಾಯಿತಿ ನೀಡಲಾಗಿದೆ. 43 ಇಂಚಿನ ಅಲ್ಟ್ರಾ ಹೆಚ್​ಡಿ ಟಿವಿ 24,999 ರೂಪಾಯಿಗೆ ಲಭ್ಯವಿದೆ. ಅಂದಹಾಗೆ ಈ ಟಿವಿಯ ಎಂಆರ್​ಪಿ ಬೆಲೆ 47900 ರೂಪಾಯಿ ಆಗಿದೆ. ಈ ಡೀಲ್​ನಲ್ಲಿ ಫ್ಲಿಪ್​ಕಾರ್ಟ್​ 47 ಶೇಕಡಾ  ರಿಯಾಯಿತಿ ನೀಡಿದೆ. ಸ್ಯಾಮ್​ಸಂಗ್​ 32 ಇಂಚಿನ ಟಿವಿಗೆ ಅಂದಾಜು 18 ಶೇಕಡಾ ರಿಯಾಯಿತಿ ಇದೆ.

ಫ್ಲಿಪ್​ಕಾರ್ಟ್​ನ ಈ ಸೇಲ್​​ನಲ್ಲಿ ಸೆಲ್​ ಫೋನ್​​ಗಳ ಮೇಲೂ ಭಾರಿ  ಡಿಸ್ಕೌಂಟ್​ ಇಡಲಾಗಿದೆ. 29,999 ರೂಪಾಯಿ ಮೌಲ್ಯದ Samsung Galaxy F62 ಮೊಬೈಲ್​ 23,999  ರೂಪಾಯಿಗೆ ಲಭ್ಯವಿದೆ. ಅಂದರೆ ಈ ಆಫರ್​ನಲ್ಲಿ ಗ್ರಾಹಕರಿಗೆ 20 ಶೇಕಡಾ ಡಿಸ್ಕೌಂಟ್​ ಸಿಗಲಿದೆ. Molife SENSE Smartwatch ಗೆ ಫ್ಲಿಪ್​ಕಾರ್ಟ್ 40 ಪರ್ಸೆಂಟ್​ ಡಿಸ್ಕೌಂಟ್​ ನೀಡಿದೆ. 5999 ರೂಪಾಯಿಯ ಸ್ಮಾರ್ಟ್ ವಾಚ್​ ಕೇವಲ 3599 ರೂಪಾಯಿಗೆ ಲಭ್ಯವಿದೆ. ಇನ್ನೇನು ಬೇಸಿಗೆ ಕಾಲ ಆರಂಭವಾಗಲಿದೆ. ಹೀಗಾಗಿ ಏರ್​ ಕೂಲರ್​ಗಳ ಮೇಲೂ ಭಾರೀ ಡಿಸ್ಕೌಂಟ್​ ನೀಡಲಾಗಿದೆ. Maharaja Whiteline 65 L Desert Air Coolerಗೆ 24 ಪರ್ಸೆಂಟ್​​ ರಿಯಾಯಿತಿ ಸಿಗಲಿದೆ.
ಫ್ಲಿಪ್​ಕಾರ್ಟ್​ನ ಈ ಸ್ಪೆಶಲ್​ ಸೀಲ್​​ ಇಂದು ಕೊನೆಯಾಗಲಿದೆ. ನಿಮ್ಮ ಪ್ರೀತಿ ಪಾತ್ರರಿಗೆ, ಸಂಬಂಧಿಗಳಿಗೆ ಗಿಫ್ಟ್ ನೀಡಬೇಕು ಅಂತಿದ್ರೆ ಇಲ್ಲವೇ ನಿಮಗೇ ಏನಾದ್ರೂ ಕೊಂಡುಕೊಳ್ಳಬೇಕು ಅಂತಿದ್ರೆ ಈ ಕೊನೆಯ ದಿನದ ಅವಕಾಶವನ್ನ ಮಿಸ್​ ಮಾಡಿಕೊಳ್ಳದಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...