ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ ಕಾರ್ಟ್ ಫ್ಲಿಪ್ ಸ್ಟಾರ್ಟ್ ಡೇ ಘೋಷಣೆ ಮಾಡಿದೆ. ಪ್ರತಿ ತಿಂಗಳು ಮೊದಲ ದಿನಾಂಕದಿಂದ ಮೂರು ದಿನಗಳವರೆಗೆ ಈ ಫ್ಲಿಪ್ ಸ್ಟಾರ್ಟ್ ನಡೆಯಲಿದೆ. ಈ ಬಾರಿ ಜೂನ್ 1 ರಿಂದ ಫ್ಲಿಪ್ ಸ್ಟಾರ್ಟ್ ಶುರುವಾಗಲಿದೆ. ಜೂನ್ 3 ರವರೆಗೆ ಈ ಫ್ಲಿಪ್ ಸ್ಟಾರ್ಟ್ ನಡೆಯಲಿದೆ.
ಐಸಿಐಸಿಐ ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ವಹಿವಾಟಿನಲ್ಲಿ ಶೇಕಡಾ 10ರಷ್ಟು ರಿಯಾಯಿತಿ ಸಿಗಲಿದೆ. ಮನೆ, ಅಡುಗೆ ವಸ್ತುಗಳ ಮೇಲೆ ಫ್ಲಿಪ್ ಕಾರ್ಟ್ ಇದ್ರಲ್ಲಿ ಶೇಕಡಾ 70ರಷ್ಟು ರಿಯಾಯತಿ ನೀಡಲಿದೆ. ಬೇಬಿ ಡೈಪರ್ ಸೇರಿದಂತೆ ಕೆಲ ವಸ್ತುಗಳ ಬೆಲೆ 99 ರೂಪಾಯಿಯಿಂದ ಶುರುವಾಗಲಿದೆ.
ಸೌಂದರ್ಯ ಹಾಗೂ ವೈಯಕ್ತಿಕ ಆರೈಕೆ ವಸ್ತುಗಳ ಮೇಲೆ ಶೇಕಡಾ 20ರಿಂದ 70ರಷ್ಟು ರಿಯಾಯಿತಿ ಸಿಗಲಿದೆ. ಈ ಸೇಲ್ ನಲ್ಲಿ 1 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯವಿದೆ.