‘ಜುಂಡ್’ ಚಿತ್ರವು ನಟ ಅಮಿತಾಭ್ ಬಚ್ಚನ್ ಅವರು ಮಾಡಿದಂತಹ ಶ್ರೇಷ್ಠ ಚಿತ್ರಗಳಲ್ಲಿ ಒಂದಾಗಿದೆ. ಭಾರತದ ಹುಡುಗಿಯರು ಮತ್ತು ಹುಡುಗರ ಭಾವನೆಗಳನ್ನು ಸೆರೆಹಿಡಿದ ತುಂಬಾನೇ ಚೆನ್ನಾಗಿ ಮೂಡಿಬಂದಿದೆ.
ಈ ಚಿತ್ರದ ಕಥೆಯು ನಾಗ್ಪುರದ ಸಾಮಾಜಿಕ ಕಾರ್ಯಕರ್ತ ಮತ್ತು ಸ್ಲಂ ಸಾಕರ್ ಸಂಸ್ಥೆಯ ಸಂಸ್ಥಾಪಕ ಸಾಮಾಜಿಕ ಕಾರ್ಯಕರ್ತ ವಿಜಯ್ ಬಾರ್ಸೆ ಅವರ ಜೀವನವನ್ನು ಆಧರಿಸಿದೆ. ಅವರು ಸ್ಲಮ್ ಮಕ್ಕಳನ್ನು ಒಂದೆಡೆ ಸೇರಿಸಿ ಹೇಗೆ ಒಂದು ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಕಟ್ಟಿದರು ಎಂಬುದು ಚಿತ್ರದ ಕಥೆಯಾಗಿದೆ.
ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಬೀದಿ ಮಕ್ಕಳಿಂದ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ರಚಿಸಲು ಪ್ರೇರೇಪಿಸುವ ಕೋಚ್ ಆಗಿ ನಟಿಸಿದ್ದಾರೆ. ಅಮಿತಾಭ್ ಬಚ್ಚನ್ ಸೇರಿದಂತೆ ಸೈರಾಟ್ ಖ್ಯಾತಿಯ ಆಕಾಶ್ ಥೋಸರ್ ಮತ್ತು ರಿಂಕು ರಾಜ್ಗುರು ಕೂಡ ನಟಿಸಿದ್ದಾರೆ.