ಬೆಂಗಳೂರು: ಆಲೂಗಡ್ಡೆ, ಬಾಳೆಕಾಯಿ, ಗೆಣಸು ಮೊದಲಾದ ಚಿಪ್ಸ್ ಗಳ ಮಾದರಿಯಲ್ಲೇ ಬೂತಾಯಿ ಮತ್ತು ರಾಣಿ ಮೀನಿನ ಚಿಪ್ಸ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು.
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ, ಮತ್ಸ್ಯ ಬಂಧನ ಸಂಸ್ಥೆಯ ಸಹಯೋಗದಲ್ಲಿ ಫಿಶ್ ವೇಪರ್ಸ್ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಹೆಚ್ಚು ಪೌಷ್ಟಿಕಾಂಶ ಇರುವ ವಾಸನೆ ರಹಿತ ಚಿಪ್ಸ್ ಗಳನ್ನು ಬಿಡುಗಡೆ ಮಾಡಲಾಗುವುದು. ವಿಟಮಿನ್ ಡಿ ಮತ್ತು ಬಿ 2 ಅಧಿಕವಾಗಿರುವ ಜೊತೆಗೆ ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿರುವ ಮೀನಿನ ಚಿಪ್ಸ್ ಗಳು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಳಿಗೆಗಳಲ್ಲಿ ಸಿಗಲಿವೆ.
ಇದರೊಂದಿಗೆ ಮೀನಿನ ಮಸಾಲೆಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲಾಗುವುದು. ವಾಸನೆ ರಹಿತ ಪಾಲಕ್, ಕ್ಯಾರೆಟ್, ಟೊಮೇಟೊ, ಮೆಣಸಿನಕಾಯಿ ಮಸಾಲ ಮೊದಲಾದ ಪ್ಲೇವರ್ ಗಳಲ್ಲಿ ಬೂತಾಯಿ ಮತ್ತು ರಾಣಿ ಮೀನಿನ ಚಿಪ್ಸ್ ಗಳನ್ನು ಮಾರಾಟ ಮಾಡಲಾಗುವುದು ಎಂದು ಹೇಳಲಾಗಿದೆ.