ನವದೆಹಲಿ: ಹೊಸ ವರ್ಷದ ಆರಂಭದೊಂದಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ(BoI) ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಸಾರ್ವಜನಿಕ ವಲಯದ ಬ್ಯಾಂಕ್ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ 444 ದಿನಗಳ ವಿಶೇಷ ಅವಧಿಯ ಠೇವಣಿ ಬಕೆಟ್‌ಗೆ ಬಡ್ಡಿದರ ಹೆಚ್ಚಿಸಿದೆ.
ವಿಶೇಷ ಅವಧಿಯ ಠೇವಣಿ ಬಕೆಟ್ ಜನವರಿ 10 ರಿಂದ ಜಾರಿಗೆ ಬಂದಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ. ಸಾಮಾನ್ಯ ಗ್ರಾಹಕರಿಗೆ, ಬ್ಯಾಂಕ್ ಈಗ 444 ದಿನಗಳ ವಿಶೇಷ ಅವಧಿಯ ಠೇವಣಿ ಬಕೆಟ್‌ನಲ್ಲಿ ಶೇಕಡಾ 7.05 ಬಡ್ಡಿದರ ನೀಡುತ್ತದೆ.
ಹಿರಿಯ ನಾಗರಿಕರಿಗೆ, 444 ದಿನಗಳ ಠೇವಣಿ ಅವಧಿಗೆ 7.55 ಪ್ರತಿಶತ ಮತ್ತು ಎರಡು ವರ್ಷದಿಂದ 5 ವರ್ಷಗಳವರೆಗೆ ಅವಧಿಗೆ ಶೇಕಡ 7.25 ಬಡ್ಡಿದರ ನೀಡಲಾಗುವುದು.
7 ದಿನಗಳಿಂದ 10 ವರ್ಷಗಳವರೆಗೆ ಪಕ್ವವಾಗುವ ಇತರ ಅವಧಿಯ ಠೇವಣಿಗಳ ಬಡ್ಡಿ ದರಗಳು ಸಾಮಾನ್ಯ ಗ್ರಾಹಕರಿಗೆ 3 ಪ್ರತಿಶತದಿಂದ 6.75 ಪ್ರತಿಶತದ ವ್ಯಾಪ್ತಿಯಲ್ಲಿರುತ್ತವೆ. ಪರಿಷ್ಕೃತ ಬಡ್ಡಿದರಗಳು ದೇಶೀಯ, NRO ಮತ್ತು NRE ಠೇವಣಿಗಳಿಗೆ ಅನ್ವಯಿಸುತ್ತವೆ.