ಚೀನಾ ಮೂಲದ ಅಪ್ಲಿಕೇಶನ್ನಿಂದ ಬಳಕೆದಾರರ ಮಾಹಿತಿ ಸೋರಿಕೆಯಾಗ್ತಿದೆ ಎಂಬ ಕಾರಣಕ್ಕೆ ಪಬ್ ಜಿ ಸೇರಿದಂತೆ ಚೀನಾದ ಸಾಕಷ್ಟು ಪ್ರಖ್ಯಾತ ಅಪ್ಲಿಕೇಶನ್ಗಳನ್ನ ಬ್ಯಾನ್ ಮಾಡಿತ್ತು. ಈ ನಡುವೆ ಪಬ್ ಜಿ ಗೇಮ್ನಂತದ್ದೇ ಅಪ್ಲಿಕೇಶನ್ ಆದ ಫೌಜಿ ಬಗ್ಗೆ ಘೋಷಣೆ ಮಾಡಲಾಗಿತ್ತು.
ಈ ಗೇಮಿಂಗ್ ಅಪ್ಲಿಕೇಶನ್ ಯಾವಾಗ ಲಭ್ಯವಾಗುತ್ತೆ ಎಂದು ಬೆರಗುಗಣ್ಣಿನಿಂದ ಕಾಯುತ್ತಿದ್ದವರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಗಣರಾಜ್ಯೋತ್ಸವ ದಿನದಂದು ಫೌ – ಜಿ ಗೇಮ್ ಗೂಗಲ್ ಪ್ಲೇಸ್ಟೋರ್ನಲ್ಲಿ ಲಭ್ಯವಿದೆ.
ಎನ್ಕೋರ್ ಈ ಗೇಮಿಂಗ್ ಅಪ್ಲಿಕೇಶನ್ನ್ನು ಅಭಿವೃದ್ಧಿಪಡಿಸಿದೆ. ಡಿಸೆಂಬರ್ನಿಂದ ಆಟದ ಪೂರ್ವ ನೋಂದಣಿಗೆ ಅವಕಾಶ ನೀಡಲಾಗಿತ್ತು. ಈಗಾಗಲೇ 4 ಮಿಲಿಯನ್ಗೂ ಹೆಚ್ಚು ಮಂದಿ ಈ ಗೇಮ್ಗೆ ಪೂರ್ವ ನೋಂದಣಿ ಮಾಡಿದ್ದಾರೆ.
ಗಣರಾಜ್ಯೋತ್ಸವಕ್ಕೆ ಶುಭ ಕೋರಲು ಹೋಗಿ ನಟಿ ಶಿಲ್ಪಾ ಶೆಟ್ಟಿ ಯಡವಟ್ಟು…!
ಹೊಸ ಫೌಜಿ ಗೇಮ್ ಅನ್ನು ಗೂಗಲ್ ಪ್ಲೇಸ್ಟೋರ್ನಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಬಹುದಾಗಿದೆ. ಗೇಮ್ನಲ್ಲಿ ಹೆಚ್ಚಿನ ಶ್ರೇಣಿಗೆ ಹೋಗಬೇಕು ಅಂದರೆ ಕೆಲ ಅಪ್ಲಿಕೇಶನ್ಗಳನ್ನ ಖರೀದಿ ಮಾಡಬೇಕಾಗಿ ಬರಬಹುದು. ಬೆಂಗಳೂರು ಮೂಲದ ಎನ್ಕೋರ್ ಕಂಪನಿ ಈ ಗೇಮಿಂಗ್ ಅಪ್ಲಿಕೇಶನ್ನ್ನು ಅಭಿವೃದ್ಧಿ ಪಡಿಸಿದೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಳೆದ ವರ್ಷದ ಸಪ್ಟೆಂಬರ್ನಲ್ಲಿ ಆತ್ಮನಿರ್ಭರ್ ಭಾರತದಡಿಯಲ್ಲಿ ಈ ಗೇಮಿಂಗ್ ಅಪ್ಲಿಕೇಶನ್ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲದೇ ನಟ ಅಕ್ಷಯ್ ಕುಮಾರ್ ಕೂಡ ಎನ್ಕೋರ್ ಕಂಪನಿ ಜೊತೆ 20 ಪ್ರತಿಶತ ಸಹಭಾಗಿತ್ವವನ್ನ ಹೊಂದಿದ್ದಾರೆ.